ದೇಶಪ್ರಮುಖ ಸುದ್ದಿ

ಟಿಕೆಟ್ ಬುಕ್ಕಿಂಗ್’ಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ ಐಆರ್‌‍ಸಿಟಿಸಿ

ನವದೆಹಲಿ: ರೈಲ್ವೆ ಪ್ರಯಾಣಿಕರಿಗೆ ಸುಲಭವಾಗಿ, ವೇಗವಾಗಿ ಟೆಕೆಟ್ ಬುಕ್ ಮಾಡಲು ಸಾಧ್ಯವಾಗುವಂತೆ ಭಾರತೀಯ ರೈಲ್ವೆ ಇಲಾಖೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಈ ಆ್ಯಪ್‍ ಅನ್ನು ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಏಕೀಕರಿಸಲಾಗಿದೆ.

ಈ ಹೊಸ ಆಪ್ ಮೂಲಕ ತತ್ಕಾಲ್ ಟಿಕೆಟ್, ಮಹಿಳಾ ರಿಸರ್ವೇಷನ್, ಪ್ರೀಮಿಯಂ ತತ್ಕಾಲ್, ಕೋಟಾ ಬುಕ್ಕಿಂಗ್ ಮಾಡಿಕೊಳ್ಳಬಹುದು. ಆಸನಗಳನ್ನು ಮುಂಗಡ ಕಾದಿರಿಸಲು ಇದರಿಂದ ಸಾಧ್ಯವಾಗಲಿದೆ. ಅತ್ಯಾಧುನಿಕ ತಾಂತ್ರಿಕತೆಯೊಂದಿಗೆ ಈ ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದೆ.

ಮುಂದಿನ ಪ್ರಯಾಣದ ಬಗ್ಗೆಯೂ ಈ ಆ್ಯಪ್ ಮಾಹಿತಿಯನ್ನು ನೀಡುತ್ತದೆ ಎಂದು ಐಆರ್‌‍ಸಿಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

comments

Related Articles

error: