ಮೈಸೂರು

“ಆಪರೇಷನ್ ನಂಬರ್ ಪ್ಲೇಟ್” ಕಾರ್ಯಾಚರಣೆ : 316 ವಾಹನಗಳ ವಿರುದ್ಧ ಕ್ರಮ; 46,400 ರೂ. ದಂಡ ಸಂಗ್ರಹ

ಮೈಸೂರು,ಜ.7:- ಮೈಸೂರು ನಗರದಲ್ಲಿ ವಾಹನಗಳಿಗೆ ನಂಬರ್ ಪ್ಲೇಟ್ ಬಳಸದೆ ವಾಹನ ಚಾಲನೆ ಮಾಡುತ್ತಿರುವುದು ಕಂಡು ಬಂದಿದ್ದು, ಇವುಗಳಲ್ಲಿ ಕೆಲವು ವಾಹನ ಚಾಲಕರು ತಮ್ಮ ನಂಬರ್ ಪ್ಲೇಟ್  ಇಲ್ಲದ ವಾಹನಗಳನ್ನು ಅಕ್ರಮ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ, ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡುವ ಚಾಲಕರು/ಮಾಲೀಕರುಗಳ ವಿರುದ್ಧ ಜ.5ರಂದು ಮೈಸೂರು ನಗರದಲ್ಲಿ “ಆಪರೇಷನ್ ನಂಬರ್ ಪ್ಲೇಟ್ ” ಎಂಬ ಹೆಸರಿನಡಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.

ಈ ಕಾರ್ಯಾಚರಣೆಯಲ್ಲಿ ನಂಬರ್ ಪ್ಲೇಟ್ ಇಲ್ಲದ 316 ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಿ, 22 ವಾಹನಗಳನ್ನು ವಶಕ್ಕೆ ಪಡೆದಿದ್ದು, ಇವುಗಳಿಂದ ಒಟ್ಟು 46,400 ರೂ ದಂಡವನ್ನು ಸಂಗ್ರಹ ಮಾಡಲಾಗಿದೆ. ಇನ್ನು ಮುಂದೆ ಕಡ್ಡಾಯವಾಗಿ ವಾಹನಗಳಿಗೆ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳುವಂತೆ ತಪ್ಪಿದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಗಿದೆ. ಈ  ವಿಶೇಷ ಕಾರ್ಯಾಚರಣೆಯನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ ಡಾ. ವಿಕ್ರಮ್ ಅಮಟೆ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ.

ಮೈಸೂರು ನಗರದಾದ್ಯಂತ ಸಂಚರಿಸುವ ನಂಬರ್ ಪ್ಲೇಟ್ ಇಲ್ಲದ ವಾಹನಗಳ ಚಾಲಕರು/ಮಾಲೀಕರುಗಳ ವಿರುದ್ಧ ಇನ್ನು ಮುಂದೆಯೂ ಸದರಿ ಕಾರ್ಯಾಚರಣೆಯು ಮುಂದುವರಿಯಲಿದ್ದು, ವಾಹನಗಳ ಮಾಲೀಕರು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ನಿಗದಿಪಡಿಸಿದಂತೆ ತಮ್ಮ ವಾಹನಗಳಿಗೆ ತಪ್ಪದೇ ನಂಬರ್ ಪ್ಲೇಟ್‍ಗಳನ್ನು ಅಳವಡಿಸಿಕೊಳ್ಳಬೇಕೆಂದು ಮೈಸೂರು ನಗರದ ಪೊಲೀಸ್ ಆಯುಕ್ತ ಡಾ. ಎ. ಸುಬ್ರಮಣ್ಯೇಶ್ವರ ರಾವ್  ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: