ಮೈಸೂರು

ಅಕ್ರಮವಾಗಿ ಗಾಂಜಾ ಮಾರಾಟ : ಮಹಿಳೆಯ ಬಂಧನ

ಮೈಸೂರು,ಜ.7:- ಮೈಸೂರು ನಗರದ ಸಿಸಿಬಿ ಪೊಲೀಸರು ಲಷ್ಕರ್ ಪೊಲೀಸ್ ಠಾಣಾ ಸರಹದ್ದು ಮೊಹಮ್ಮದ್ ಸೇಠ್ ಬ್ಲಾಕ್ 1ನೇ ಮುಖ್ಯರಸ್ತೆಯಲ್ಲಿರುವ ಮನೆ ನಂ.3207/18ರ ಮೇಲೆ ದಾಳಿ ಮಾಡಿ ಅಕ್ರಮವಾಗಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವರನ್ನು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಲಷ್ಕರ್ ಮೊಹಲ್ಲಾ ಮೊಹಮ್ಮದ್ ಸೇಠ್ ಬ್ಲಾಕ್ ನ 1ನೇ ಮುಖ್ಯರಸ್ತೆಯ ಸಲ್ಮಾಬಾಬು ಕೋಂ ಮಹಮ್ಮದ್ ಅಜ್ಮಲ್ (34) ಎಂದು ಗುರುತಿಸಲಾಗಿದೆ. ಈಕೆಯನ್ನು ದಸ್ತಗಿರಿ ಮಾಡಿ ಆಕೆಯ ವಶದಲ್ಲಿದ್ದ 3ಕೆ.ಜಿ, 637ಗ್ರಾಂ ತೂಕದ ಗಾಂಜಾ ಮತ್ತು ನಗದು ಹಣ 750ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.  ಈ ಕುರಿತು ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾದ ಪೊಲೀಸ್ ಠಾಣೆ ಮೈಸೂರು ಇಲ್ಲಿ ಪ್ರಕರಣ ದಾಖಲಾಗಿದೆ.

ದಾಳಿಯನ್ನು ಮೈಸೂರು ನಗರ ಉಪಪೊಲೀಸ್ ಆಯುಕ್ತ ಡಾ.ವಿಕ್ರಂ ಆಮಟೆ ಮಾರ್ಗದರ್ಶನದ ಮೇರೆಗೆ ಸಿಸಿಬಿಯ ೆಸಿಪಿ ಬಿ.ಆರ್.ಲಿಂಗಪ್ಪನವರ ನೇತೃತ್ವದಲ್ಲಿ ಇನ್ಸಪೆಕ್ಟರ್ ಕೃಷ್ಣಪ್ಪ ಸಿಬ್ಬಂದಿಗಳಾದ ಎಲ್. ಸುಭಾಶ್ಚಂದ್ರ, ಮಾಧರಾಜೇ ಅರಸ್, ಕರುಣಾಕರ್, ಮುರುಳಿಗೌಡ, ನಾಗೇಶ್ ಎಂ.ಎನ್, ಪುನೀತ್ ಹೆಚ್.ಎಸ್, ನರಸಿಂಗರಾವ್, ಪುಷ್ಪಲತಾಬಾಯಿ ಮತ್ತು ರಾಜೇಶ್ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: