
ಪ್ರಮುಖ ಸುದ್ದಿ
ಟಂಟಂ ಮತ್ತು ಟಿಪ್ಪರ್ ನಡುವೆ ಡಿಕ್ಕಿ : ಓರ್ವ ಸಾವು
ರಾಜ್ಯ(ಕೊಪ್ಪಳ)ಜ.7:- ಟಂಟಂ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡ ಘಟನೆ ಕೊಪ್ಪಳದ ಇಂದಿರಾ ಕ್ಯಾಂಟೀನ್ ಎದುರು ನಡೆದಿದೆ.
ಅಪಘಾತದ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಪಾಮಣ್ಣ (60) ಎಂದು ಗುರುತಿಸಲಾಗಿದೆ. ಸದ್ದಾಂ, ಹುಲಗಪ್ಪ ಎಂಬವರು ಗಂಭೀರ ಗಾಯಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಟಂಟಂ ನಜ್ಜುಗುಜ್ಜಾಗಿದೆ. (ಕೆ.ಎಸ್,ಎಸ್.ಎಚ್)