ಮೈಸೂರು

ಕುತ್ತಿಗೆ ಬಿಗಿದು ವ್ಯಕ್ತಿಯೋರ್ವನ ಹತ್ಯೆ

ಮೈಸೂರು,ಜ.7:- ಕುತ್ತಿಗೆ ಬಿಗಿದು ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಘಟನೆ ತಿ.ನರಸೀಪುರ ಪಟ್ಟಣದ ಆಲಗೂಡು ಸಮೀಪ ದಮ್ಮಯ್ಯನ ಬೋರೆಯಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಕೊಳ್ಳೇಗಾಲ ತಾಲೂಕಿನ ಆಲಹಳ್ಳಿ ಗ್ರಾಮದ ಲೇಟ್ ನಿಂಗೇಗೌಡ ಎಂಬವರ ಪುತ್ರ ಬಸವರಾಜು ಎಂದು ಗುರುತಿಸಲಾಗಿದ್ದು, ಕಳೆದ ಶುಕ್ರವಾರ ರಾತ್ರಿ ದುಷ್ಕರ್ಮಿಗಳ್ಯಾರೋ ಹತ್ಯೆಗೈದು ಮೃತ ದೇಹವನ್ನು ಬಿಸಾಡಿ ಹೋಗಿದ್ದು, ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಮೃತದೇಹದ ಕುತ್ತಿಗೆ ಭಾಗದಲ್ಲಿ ಬಿಗಿದಿರುವ ಚಹರೆ ಕಾಣುತ್ತಿದ್ದು, ಘಟನಾ ಸ್ಥಳಕ್ಕೆ ನಂಜನಗೂಡು ಉಪ ವಿಭಾಗದ ಡಿವೈ ಎಸ್ಪಿ ಮಲ್ಲಿಕ್, ಪೊಲೀಸ್ ಸರ್ಕಲ್ ಇನ್ಸಪೆಕ್ಟರ್ ಎಂ.ಆರ್.ಲವ ಆಗಮಿಸಿ ಪರಿಶೀಲನೆ ನಡೆಸಿದರು. ಎ ಎಸ್ ಐಗಳಾದ ಮೂರ್ತಿ ಹಾಗೂ ರಾಜೇಂದ್ರ ಅವರು ಪ್ರಕರಣ ದಾಖಲಿಸಿಕೊಂಡರು.

ತಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮೃತ ದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: