ದೇಶಪ್ರಮುಖ ಸುದ್ದಿ

ಇಪ್ಪತ್ತು ದಿನಗಳ ನಂತರ ಮತ್ತೆ ಏರಿಕೆ ಕಂಡ ಪೆಟ್ರೋಲ್-ಡಿಸೇಲ್ ಬೆಲೆ

ಬೆಂಗಳೂರು (ಜ.7): ಕಳೆದ 20 ದಿನಗಳಿಂದ ಇಳಿಕೆ ಕಾಣ್ತಿದ್ದ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಸೋಮವಾರ ಪೆಟ್ರೋಲ್-ಡಿಸೇಲ್ ಬೆಲೆ ಏರಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾಗಿರುವುದು ಇದಕ್ಕೆ ಕಾರಣವಾಗಿದೆ.

ಅಮೆರಿಕಾ ಹಾಗೂ ಚೀನಾ ಮಧ್ಯದ ವ್ಯಾಪಾರಿ ಯುದ್ಧ ಶೀಘ್ರವೇ ತಣ್ಣಗಾಗುವ ಸಾಧ್ಯತೆಯಿದ್ದು, ಇದು ಕಚ್ಚಾ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ಡಿಸೆಂಬರ್ 17, 2018 ರಂದು ಏರಿಕೆ ಕಂಡಿದ್ದ ಪೆಟ್ರೋಲ್-ಡಿಸೇಲ್ ಬೆಲೆ ಜನವರಿ 7,2019 ರಂದು ಮತ್ತೆ ಏರಿಕೆಯಾಗಿದೆ. ಸೋಮವಾರ ಪೆಟ್ರೋಲ್ ಬೆಲೆ 21ರಿಂದ 22 ಪೈಸೆಯಷ್ಟು ಹೆಚ್ಚಾಗಿದೆ. ಡಿಸೇಲ್ ಬೆಲೆ 8 ಪೈಸೆಯಿಂದ 9 ಪೈಸೆಯಷ್ಟು ಹೆಚ್ಚಳವಾಗಿದೆ. ರಾಷ್ಟ್ರೀಯ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 68 ರೂಪಾಯಿ 50 ಪೈಸೆಯಾಗಿದೆ. ಡಿಸೇಲ್ ಬೆಲೆ 62 ರೂಪಾಯಿ 24 ಪೈಸೆಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 21 ಪೈಸೆ ಹೆಚ್ಚಾಗಿದ್ದು, ಲೀಟರ್ ಗೆ 70 ರೂಪಾಯಿ 74 ಪೈಸೆಗೆ ಮಾರಾಟವಾಗ್ತಿದೆ. ಡಿಸೇಲ್ 9 ಪೈಸೆ ಹೆಚ್ಚಳ ಕಂಡು ಲೀಟರ್ ಗೆ 64 ರೂಪಾಯಿ 28 ಪೈಸೆಯಾಗಿದೆ. (ಎನ್.ಬಿ)

Leave a Reply

comments

Related Articles

error: