ಕರ್ನಾಟಕಮನರಂಜನೆ

ಯಶ್ ಪಾಳಯದಲ್ಲೂ ಇಲ್ಲ ಹುಟ್ಟುಹಬ್ಬದ ಸಂಭ್ರಮ! ಕಾರಣವೇನು?

ಬೆಂಗಳೂರು (ಜ.7): ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಆದರೆ ನಟ ಯಶ್ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದಿದೆ. ಯಶ್ ಅವರು ಈ ಬಾರಿ ಹುಟ್ಟುಹಬ್ಬ ಆಚರಿಸುತ್ತಿಲ್ಲ! ಯಾಕೆ ಅಂತೀರಾ? ಮುಂದೆ ಓದಿ.

‘ಕೆಜಿಎಫ್’ ಸಿನಿಮಾ ಸೂಪರ್ ಹಿಟ್ ಆದ ಕಾರಣ ಈ ವರ್ಷ ಯಶ್ ಅವರು ಹುಟ್ಟುಹಬ್ಬವನ್ನು ಇನ್ನೂ ಜೋರಾಗಿ ಮಾಡಬಹುದು ಎನ್ನುವ ಲೆಕ್ಕಾಚಾರ ಕೆಲವರಿಗೆ ಇರಬಹುದು. ಯಶ್ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ! ಈ ಬಗ್ಗೆ ಫೇಸ್ ಬುಕ್‍ನಲ್ಲಿ ಮಾತನಾಡಿರುವ ಅವರು, ಅಭಿಮಾನಿಗಳಿಗೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಪ್ರತಿ ವರ್ಷ ಅಭಿಮಾನಿಗಳು ಅದ್ದೂರಿಯಾಗಿ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು. ಬೇರೆ ಬೇರೆ ಜಿಲ್ಲೆಗಳಿಂದ ಜನರು ಬರುತ್ತಿರುತ್ತಿದ್ದರು. ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನವಾದ ಕಾರಣ ನಟ ಯಶ್ ಈ ವರ್ಷದ ತಮ್ಮ ಹುಟುಹಬ್ಬವನ್ನು ಆಚರಣೆ ಮಾಡುತ್ತಿಲ್ಲ. ಈ ಮೂಲಕ ಚಿತ್ರರಂಗದ ಹಿರಿಯ ನಟ ಹಾಗೂ ತಮ್ಮ ಪ್ರೀತಿಯ ಅಣ್ಣನಿಗೆ ರಾಕಿಂಗ್ ಸ್ಟಾರ್ ಗೌರವ ಸಮರ್ಪಣೆ ಮಾಡುತ್ತಿದ್ದಾರೆ ಎಂದು ಸಂಜೆ ಯಶ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಯಶ್, ”ಜನವರಿ 8 ರಂದು ನನ್ನ ಹುಟ್ಟುಹಬ್ಬ. ನನಗೆ ಗೊತ್ತು, ಸಾಕಷ್ಟು ಅಭಿಮಾನಿಗಳು ಪ್ರೀತಿಯಿಂದ ನನ್ನನ್ನು ಭೇಟಿ ಮಾಡಬೇಕು ಅಂತ ಕಾಯುತ್ತಿರುತ್ತೀರಿ. ಆದರೆ, ಈ ಬಾರಿ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಲು ನನಗೆ ಇಷ್ಟವಿಲ್ಲ. ನಮ್ಮ ಕುಟುಂಬದ ಹಿರಿಯರಾದ ಅಂಬರೀಶ್ ಅವರು ನಮ್ಮ ಜೊತೆಗೆ ಇಲ್ಲ. ಅವರಿಗೆ ಗೌರವ ಸೂಚಿಸುವ ಮೂಲಕ ನಾನು ಬರ್ತ್ ಡೇ ಆಚರಿಸುತ್ತಿಲ್ಲ.” ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

”ನಿಮ್ಮ ಪ್ರೀತಿ ನೋಡಿ ನನಗೆ ಬಹಳ ಖುಷಿಯಾಗಿದೆ. ಆದರೆ, ನನಗೆ ಈ ಬಾರಿ ಹುಟ್ಟುಹಬ್ಬ ಮಾಡಿಕೊಳ್ಳುವ ಬಯಕೆ ಇಲ್ಲ. ಯಾರು ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ನಿಮ್ಮನ್ನು ಪ್ರತಿ ವರ್ಷ ಭೇಟಿ ಮಾಡಲು ನಾನು ಇಷ್ಟ ಪಡುತ್ತೇನೆ. ನಿಮ್ಮ ನಿಮ್ಮ ಊರುಗಳಿಗೆ ನಾನೇ ‘ಕೆಜಿಎಫ್’ ಯಶಸ್ಸಿನ ಹಿನ್ನಲೆ ‘ಯಶೋ ಯಾತ್ರೆ’ ಮೂಲಕ ಬರುತ್ತಿದ್ದೇನೆ.” – ಯಶ್, ನಟ

ನಟ ಯಶ್ ಅವರಿಗೂ ಹಿಂದೆ ವಿನೋದ್ ಪ್ರಭಾಕರ್ ಹಾಗೂ ಮನೋರಂಜನ್ ಕೂಡ ಈ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಲಿಲ್ಲ. ಅಂಬರೀಶ್ ಅವರ ನಿಧನದ ಹಿನ್ನಲೆ ವಿನೋದ್ ಪ್ರಭಾಕರ್ ಮತ್ತು ಮನೋರಂಜನ್ ಅವರೂ ಸಹ ಬರ್ತ್ ಡೇ ಆಚರಣೆಗೆ ಬ್ರೇಕ್ ಹಾಕಿ ಅಂಬಿಗೆ ಗೌರವ ಸೂಚಿಸಿದ್ದರು.

ಛಾಲೆಂಚಿಂಗ್ ಸ್ಟಾರ್ ದರ್ಶನ್ ಅವರೂ ಕೂಡ ಫೆಬ್ರವರಿಯಲ್ಲಿ ತಮ್ಮ ಹುಟ್ಟುಹಬ್ಬ ಆಚರಣೆ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.(ಎನ್.ಬಿ)

Leave a Reply

comments

Related Articles

error: