ಕ್ರೀಡೆ

ಟೆಸ್ಟ್ ಸರಣಿ ಗೆದ್ದ ಕೊಹ್ಲಿ ಪಡೆಗೆ ಪ್ರಧಾನಿ ಮೋದಿ ಅಭಿನಂದನೆ

ಸಿಡ್ನಿ,ಜ.7-ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿ ಇತಿಹಾಸ ನಿರ್ಮಿಸಿರುವ ಟೀಂ ಇಂಡಿಯಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಈ ಸಾಧನೆಗೆ ಪ್ರಧಾನಿ ಮೋದಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಟೀಂ ಇಂಡಿಯಾಗೆ ಅಭಿನಂದನೆಗಳು. ಕಠಿಣ ಹೋರಾಟ, ತಂಡದ ಸಾಂಘಿಕ ಪ್ರದರ್ಶನದಿಂದ ಗೆಲುವು ಸಾಧ್ಯವಾಗಿದೆ. ಈ ಗೆಲುವಿಗೆ ಟೀಂ ಇಂಡಿಯಾ ಅರ್ಹವಾಗಿದೆ. ಕೆಲ ಅದ್ಬುತ ಪ್ರದರ್ಶನಕ್ಕೆ ಸರಣಿ ಸಾಕ್ಷಿಯಾಗಿದೆ. ಮುಂದಿನ ಪಂದ್ಯಗಳಲ್ಲೂ ಯಶಸ್ಸು ಸಿಗಲಿ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.

ಆಸ್ಟೇಲಿಯಾ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿತು. ಹೀಗಾಗಿ ಭಾರತ ಸರಣಿಯನ್ನ 2-1 ಅಂತರದಲ್ಲಿ ಗೆದ್ದುಕೊಂಡು ದಾಖಲೆ ಬರೆದಿದೆ. (ಎಂ.ಎನ್)

Leave a Reply

comments

Related Articles

error: