ಕರ್ನಾಟಕಪ್ರಮುಖ ಸುದ್ದಿಮೈಸೂರು

ಪರೀಕ್ಷೆಗೆ ಒಂದು ನಿಮಿಷ ತಡವಾದರು ಪ್ರವೇಶವಿಲ್ಲ : ಎಸ್ಎಸ್ಎಲ್‍ಸಿ ವಿದ್ಯಾರ್ಥಿಗಳಿಗೆ ಮಂಡಳಿಯಿಂದ ಎಚ್ಚರಿಕೆ

ಪರೀಕ್ಷೆಗೆ ಒಂದು ನಿಮಿಷ ತಡ ಮಾಡಿ ಹೋದರೂ ಪರೀಕ್ಷೆ ಬರೆಯುವುದರಿಂದ ವಿದ್ಯಾರ್ಥಿಗಳು ವಂಚಿತರಾಗಿ ಪರೀಕ್ಷಾ ಕೊಠಡಿಗೆ ಪ್ರವೇಶ ನಿರ್ಬಂಧಿಸಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್.ಎಸ್.ಎಲ್.ಸಿ. ಬೋರ್ಡ್‍ನಿಂದ ಸುತ್ತೋಲೆ ಬಂದಿದೆ.

ಪ್ರಶ್ನೆ ಪತ್ರಿಕೆ ಬಹಿರಂಗವನ್ನು ತಡೆಯುವ ನಿಟ್ಟಿನಲ್ಲಿ ಹಲವಾರು ವಿನೂತನ ಕಠಿಣ ಕ್ರಮವನ್ನು ಮಂಡಳಿಯು ಜರುಗಿಸುತ್ತಿದ್ದು, ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಕ್ರಮ ಪ್ರಯೋಗಾತ್ಮಕ ಕ್ರಮಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ.

ಪರೀಕ್ಷೆ ಪ್ರಾರಂಭವಾಗೋದು ಬೆಳಿಗ್ಗೆ 9.30ಕ್ಕೆ, 9.15 ರಿಂದ 9.30ರೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವುದು ಕಡ್ಡಾಯ. ಬೆಳಿಗ್ಗೆ 9.15ಕ್ಕೆ ಮೊದಲ ಗಂಟೆ ಹೊಡೆಯಲಿದ್ದು ವಿದ್ಯಾರ್ಥಿಗಳು ಕೊಠಡಿಯಲ್ಲಿ ಪ್ರವೇಶಿಸಬೇಕು. ತದನಂತರ 10 ನಿಮಿಷದಲ್ಲಿ ಹೊಡೆಯುವ ಗಂಟೆಯಿಂದ ಮುಖ್ಯ ಅಧೀಕ್ಷಕರಿಂದ ಕೊಠಡಿ ಮೇಲ್ವೀಚಾರಕರ ಕೈಗೆ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುವುದು.

“ಸರಿಯಾಗಿ 9.30ಕ್ಕೆ ಹೊಡೆಯುವ ಮೂರನೇ ಲಾಂಗ್’ಬೆಲ್‍’ನಿಂದ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ವಿತರಣೆ ಮಾಡಲಾಗುವುದು. ಪ್ರಶ್ನೆ ಪತ್ರಿಕೆ ವಿತರಣೆ ನಂತರ ಬರುವ ವಿದ್ಯಾರ್ಥಿಗಳನ್ನು ಪ್ರವೇಶವಿರುವುದಿಲ್ಲ”ವೆಂದು ಡಿಡಿಪಿಐಗಳಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಮಾನವೀಯತೆ ದೃಷ್ಟಿಯಿಂದ 10 ಗಂಟೆಯೊಳಗೆ ಬರುವ ವಿದ್ಯಾರ್ಥಿಗಳನ್ನು ಪರೀಕ್ಷೆ ಪ್ರವೇಶವನ್ನು ಈ ಹಿಂದಿನ ಸಾಲುಗಳಲ್ಲಿ ನೀಡಲಾಗುತ್ತಿತ್ತು.

Leave a Reply

comments

Related Articles

error: