ಸುದ್ದಿ ಸಂಕ್ಷಿಪ್ತ

ಸಾಂಸ್ಕೃತಿಕ ಸೌರಭ ನಾಳೆ

ಮೈಸೂರು,ಜ.7 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಾಳೆ ಸಂಜೆ 4 ಗಂಟೆಗೆ ಗಾಂಧಿನಗರದ ಬಸ್ ನಿಲ್ದಾಣ ಮೈದಾನದಲ್ಲಿ ಜ.8ರ ಸಂಜೆ 4 ಗಂಟೆಗೆ ‘ಸಾಂಸ್ಕೃತಿಕ ಸೌರಭ’ ಅನ್ನು ಏರ್ಪಡಿಸಲಾಗಿದೆ.

ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸುವರು. ಜಾನಪದ ಹಿರಿಯ ವಿದ್ವಾಂಸ ಪಿ.ಕೆ.ರಾಜಶೇಖರ ಉದ್ಘಾಟಿಸಲಿದ್ದಾರೆ. ಮೇಯರ್ ಪುಷ್ಪಲತಾ ಜಗನ್ನಾಥ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಮರಿತಿಬ್ಬೇಗೌಡ, ಆರ್.ಧರ್ಮಸೇನ, ಕೆ.ವಿ.ನಾರಾಯಣಸ್ವಾಮಿ ಮತ್ತಿತರು ಜನಪ್ರತಿನಿಧಿಗಳು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: