Uncategorized

ಗ್ರಾಮ ಮಟ್ಟದಲ್ಲಿ ಗ್ರಾಮಲೆಕ್ಕಿಗರ ಜವಾಬ್ದಾರಿ ಹೆಚ್ಚು: ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ

ಮಂಡ್ಯ (ಜ.8): ಸರ್ಕಾರದ ಕೆಲಸ ದೇವರ ಕೆಲಸ’ವೆಂದು ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅರಿತು ಕೆಲಸನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಗ್ರಾಮಲೆಕ್ಕಿಗರ ಜವಾಬ್ದಾರಿ ಹೆಚ್ಚಿನದು ಎಂದು ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ತಿಳಿಸಿದರು.

ಅವರು ಸೋಮವಾರ ಆಯೋಜಿಸಲಾಗಿದ್ದ ಮಂಡ್ಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆದ ಗ್ರಾಮಲೆಕ್ಕಿಗರ ‘ವೃತ್ತಿ ಬುನಾದಿ’ ತರಬೇತಿ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮಲೆಕ್ಕಿಗರು ಆಯಾ ಗ್ರಾಮದ ಪ್ರತಿ ಕುಟುಂಬಕ್ಕೆ, ಭೂಮಿ(ಜಮೀನು) ಹೊಂದಿರುವ ರೈತರಿಗೆ ಭೂ-ದಾಖಲೆಯ ಆರ್.ಟಿ.ಸಿ, ಪಹಣಿ ಪತ್ರಗಳು, ಜನನ-ಮರಣ, ಜಾತಿ ಪ್ರಮಾಣ ಪತ್ರ, ವಾಸಸ್ಥಳ, ವರಮಾನ ದೃಢೀಕರಣ ಪತ್ರಗಳು, ದೃಢೀಕರಣ ಪತ್ರಗಳ ಸಂಬಂಧ ಮಹಜರು, ಶಿಫಾರಸ್ಸು, ವಂಶವೃಕ್ಷ ಇತ್ಯಾದಿಯಾಗಿ ವರದಿ ನೀಡುವುದು. ಗ್ರಾಮಲೆಕ್ಕಿಗರ ಕರ್ತವ್ಯವಾಗಿರುತ್ತದೆ. ಇದನ್ನು ಅರಿತು ಪ್ರಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಬಿ.ಪಿ ವಿಜಯನ್‍ರವರು ಮಾತನಾಡಿ ಕಂದಾಯ ಇಲಾಖೆಯು ಎಲ್ಲಾ ಇಲಾಖೆಗಳ ತಾಯಿ ಇದ್ದಂತೆ. ಎಲ್ಲಾ ಇಲಾಖೆಗಳ ಕರ್ತವ್ಯ, ಹೊಣೆಗಾರಿಕೆಗಳನ್ನು ನಿರ್ದೇಶಿಸುವ ಜವಾಬ್ದಾರಿ ಆಯಾ ಜಿಲ್ಲೆಯ ಜಿಲ್ಲಾಡಳಿತಕ್ಕೆ ಇರುತ್ತದೆ. ಗ್ರಾಮಲೆಕ್ಕಿಗರಾದ ನಿಮಗೂ ಸಹ ಒಂದೆರಡು ಗ್ರಾಮಗಳ ಜವಬ್ದಾರಿ ಕರ್ತವ್ಯಗಳು ಇರುತ್ತದೆ. ಆದ ಕಾರಣ ತರಬೇತಿಯ ಸದುಪಯೋಗವನ್ನು ಪಡೆದು ಕೆಲಸವನ್ನು ಮಾಡಲು ತಿಳಸಿದರು. ಕಾರ್ಯಕ್ರಮದಲ್ಲಿ ಭೂ-ದಾಖಲೆಗಳ ನಿರ್ದೇಶಕರಾದ ಹೇಮಲತಾ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸಿದ್ದಸ್ವಾಮಿ ಅವರು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: