ಮೈಸೂರು

ಸಾರ್ಥಕ ಸೇವಾ ಭೂಷಣ ರಾಜ್ಯ ಪ್ರಶಸ್ತಿ : ಹಿರಿಯ ನಾಗರೀಕರಿಂದ ಅರ್ಜಿ ಆಹ್ವಾನ

ಮೈಸೂರು,ಜ.8 : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ನಾಗರೀಕರ ಸಕಾಲ ಸೇವಾ ಕೇಂದ್ರ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ‘ಸಾರ್ಥಕ ಸೇವಾ ಭೂಷಣ ರಾಜ್ಯ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅರ್ಹ ಹಿರಿಯ ನಾಗರೀಕ ಸಾಧಕರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವವರು ಸಮಾಜಸೇವೆ, ಕ್ರೀಡೆ, ಚಿತ್ರಕಲೆ, ಸಾಹಿತ್ಯ, ರಂಗಭೂಮಿ, ಚಲನಚಿತ್ರ, ಕಾನೂನು ಸೇವೆ ಹಾಗೂ ಹಿರಿಯ ನಾಗರೀಕರ ಸೇವೆ ಸಲ್ಲಿಸುವಂತಹ ಸಂಸ್ಥೆಯ ಮುಖ್ಯಸ್ಥರು ಅರ್ಜಿ ಸಲ್ಲಿಸಬಹುದಾಗಿದೆ.

ತಮ್ಮ ಸ್ವ ವಿವರ ಸಮೇತ ಜ.28 ರೊಳಗೆ ಪಿ.ರಾಜಪ್ಪ, ಅಧ್ಯಕ್ಷರು, ಹಿರಿಯ ನಾಗರೀಕರ ಸಕಾಲ ಸೇವಾ ಕೇಂದ್ರ ಟ್ರಸ್ಟ್, #31, 1ನೇ ಮಹಡಿ, ಆರ್ಎಂಪಿ ಕಾಲೋನಿ ಹತ್ತಿರ ಆದಿಚುಂಚನಗಿರಿ ರಸ್ತೆ, ಕುವೆಂಪುನಗರ. ಮೈಸೂರು-570023 ಇಲ್ಲಿಗೆ ಸಲ್ಲಿಸಬಹುದಾಗಿದೆ. ವಿವರಗಳಿಗೆ 9141614633, 0821 4191266 ಅನ್ನು, ಇ-ಮೇಲ್ [email protected], ಇಲ್ಲಿಗೆ ಸಲ್ಲಿಸಬಹುದೆಂದು ಪಿ.ರಾಜಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: