ದೇಶ

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಗೆ ಅಗೌರವ: ಮೂವರಿಗೆ ಥಳಿತ

ಚೆನ್ನೈ: ಚೆನ್ನೈ ಚಲನಚಿತ್ರೋತ್ಸವದ ವೇಳೆ ಚಿತ್ರಮಂದಿರವೊಂದರಲ್ಲಿ ರಾಷ್ಟ್ರಗೀತೆ ಪ್ರಸಾರವಾದಾಗ ಎದ್ದು ನಿಂತು ಗೌರವ ನೀಡದ ಕುಟುಂಬವೊಂದರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ವಡಾಪಲಾನಿಯ ಫೋರಂ ಮಾಲ್ ನಲ್ಲಿ ಚಿತ್ರವೀಕ್ಷಣೆಗೆ ಬಂದಿದ್ದ ತಾಯಿ ಹಾಗೂ ಇಬ್ಬರು ಮಕ್ಕಳ ಮೇಲೆ ಗುಂಪೊಂದು ಹಲ್ಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮಹಿಳೆ ಮತ್ತು ಗುಂಪಿನ ಸದಸ್ಯರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಚೆನ್ನೈನಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ ಕೆಲ ಯುವಕರು ರಾಷ್ಟ್ರಗೀತೆಗೆ ಅಗೌರವ ತೋರಿದ್ದು, ಅವರ ಮೇಲೂ ಗುಂಪೊಂದು ಹಲ್ಲೆಗೆ ಯತ್ನಿಸಿತ್ತು.

ಸುಪ್ರೀಂಕೋರ್ಟ್ ನವೆಂಬರ್ 30 ರಂದು ದೇಶದ ಪ್ರತಿಯೊಂದು ಚಿತ್ರಮಂದಿರದಲ್ಲೂ ಚಿತ್ರ ವೀಕ್ಷಣೆಗೂ ಮೊದಲು ರಾಷ್ಟ್ರಗೀತೆ ಪ್ರಸಾರ ಮಾಡಬೇಕು ಎಂದು ಆದೇಶ ಹೊರಡಿಸಿತ್ತು.

Leave a Reply

comments

Related Articles

error: