ಮೈಸೂರು

ವಿವಿ ಪ್ರಭಾರ ಕುಲಪತಿಯಾಗಿ ಪ್ರೊ.ಯಶವಂತ ಡೋಂಗ್ರೆ ನೇಮಕ

ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ಅವರು ನಿವೃತ್ತರಾದ ಕಾರಣ ಅವರ ಹುದ್ದೆಯಿಂದ ತೆರವಾದ ಸ್ಥಾನಕ್ಕೆ  ಪ್ರಭಾರ ಕುಲಪತಿಯಾಗಿ  ಪ್ರೊ.ಯಶವಂತ ಡೋಂಗ್ರೆ ಅವರು ನೇಮಕಗೊಂಡಿದ್ದಾರೆ.

ಬುಧವಾರ ನಡೆದ ಸರಳ ಸಮಾರಂಭದಲ್ಲಿ ಪ್ರೊ.ಯಶವಂತ ಡೋಂಗ್ರೆ ಅವರನ್ನು ಸಿಂಡಿಕೇಟ್ ಸದಸ್ಯ ಮರಿಸ್ವಾಮಿ ಗೌಡ ಹೂಗುಚ್ಛ ನೀಡಿ ಸ್ವಾಗತಿಸಿದರು. ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ ಅಧಿಕಾರ ಸ್ವೀಕರಿಸಿದರು. ಯಶವಂತ್ ಅವರು 1992-93ರಲ್ಲಿ ಆರಂಭವಾದ ಹಾಸನದ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.

Leave a Reply

comments

Related Articles

error: