ಪ್ರಮುಖ ಸುದ್ದಿಮೈಸೂರು

ಸತ್ಯ ಪ್ರತಿಪಾದನೆಯಿಂದ ವೃತ್ತಿ ಧರ್ಮ ನಿಭಾಯಿಸಿ

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕ್ಯಾಲೆಂಡರ್ ಡೈರಿ ಬಿಡುಗಡೆ

ಮೈಸೂರು,ಜ.9 : ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2019ನೇ ಸಾಲಿನ ಡೈರಿ ಹಾಗೂ ಕ್ಯಾಲೆಂಡರ್ ಅನ್ನು ಉದ್ಯಮಿ ತರುಣ್ ಗಿರಿ, ಸಿದ್ಧಾರ್ಥನಗರದ ಕಾಗಿನೆಲೆ ಮಹಾಸಂಸ್ಥಾನ ಶಾಖಾ ಮಠದ ಪೀಠಾಧಿಪತಿ ಶ್ರೀಶಿವಾನಂದಪುರಿ ಸ್ವಾಮೀಜಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ವಿ.ರಾಜೀವ್ ಅವರುಗಳು ಇಂದು ಬಿಡುಗಡೆಗೊಳಿಸಿದರು.

ಪತ್ರಕರ್ತರ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದ ನಂತರ ಮಾತನಾಡಿದ ಶ್ರೀಶಿವಾನಂದಪುರಿ ಸ್ವಾಮೀಜಿಯವರು, ಪತ್ರಕರ್ತರಿಗೆ ಅವಹೇಳನ, ಮೂದಲಿಕೆ, ದೂರುಗಳು ಸಾಮಾನ್ಯವಾಗಿದ್ದು, ಅವುಗಳನ್ನು ಮೆಟ್ಟಿ ಸಮಚಿತ್ತದಿಂದ ಸತ್ಯಪ್ರತಿಪಾದನೆಯ ಮೂಲಕ ವೃತ್ತಿ ಧರ್ಮ ನಿಭಾಯಿಸಿ ಸುಶಿಕ್ಷಿತ ಸಮಾಜವನ್ನು ಕಟ್ಟಿ. ಅಲ್ಲದೇ ಸುಖ-ದುಃಖ, ಕಷ್ಟ ನಷ್ಟಗಳು ಸನ್ಯಾಸಿಗೂ ಹಾಗೂ ಸಂಸಾರಿಗಳಿಗೂ ಸಮವಾಗಿವೆ, ಹೀಗಿದ್ದರೂ ಪರೋಪಕರ ಪುಣ್ಯಕಾರ್ಯವನ್ನು ಬಿಡಬಾರದು ಎಂದು ಆಶಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಜಿ.ಕೆ.ಲೋಕೇಶ್ ಬಾಬು, ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: