ಕರ್ನಾಟಕಮೈಸೂರು

ಪಂಪಾ ಪ್ರಶಸ್ತಿಗೆ ಡಾ.ಹಂಪನಾ ಆಯ್ಕೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡುವ 2016ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, 2016ನೇ ಸಾಲಿನ ಪಂಪ ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ಆಯ್ಕೆಯಾಗಿದ್ದಾರೆ.

ರಾಜ್ಯ ಸರ್ಕಾರವು ಪ್ರತಿವರ್ಷ ನೀಡುವಂತೆ ಈ ಬಾರಿಯೂ ಸಹ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಲು ಮುಂದಾಗಿದೆ. ಅಂತೆಯೇ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2016 ನೇ ಸಾಲಿನ ಪಂಪ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ.ಹಂಪನಾ ಅವರಿಗೆ ನೀಡಲು ಆಯ್ಕೆ ಮಾಡಿದೆ. ಅಲ್ಲದೇ ಶಾಂತಿನಾಯಕ ಅವರಿಗೆ ಅತ್ತಿಮಬ್ಬೆ ಪ್ರಶಸ್ತಿ, ಮುದ್ದುಕೃಷ್ಣ ಅವರಿಗೆ ಶಿಶುನಾಳ ಪ್ರಶಸ್ತಿ, ಜ್ಞಾನಮೂರ್ತಿ ಅವರಿಗೆ ಕುಮಾರವ್ಯಾಸ ಪ್ರಶಸ್ತಿ, ಚನ್ನಣ್ಣ ವಾಲೀಕಾರ ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಮತ್ತು ಗಣಪತಿ ಭಟ್ ಹಾಸನಗಿ ಅವರಿಗೆ ನಿಜಗುಣ ಪುರಂದರ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಎಲ್ಲ ಪ್ರಶಸ್ತಿಗಳೂ ತಲಾ ಮೂರು ಲಕ್ಷ ರೂ. ನಗದು ಹಾಗೂ ಪುರಸ್ಕಾರವನ್ನು ಒಳಗೊಂಡಿದೆ.

Leave a Reply

comments

Related Articles

error: