
ಪ್ರಮುಖ ಸುದ್ದಿ
ಕ್ಯಾನ್ಸರ್ ಪೀಡಿತ ಚಿತ್ರ ನಿರ್ಮಾಪಕ ರಾಕೇಶ್ ರೋಶನ್ ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
ದೇಶ(ಮುಂಬೈ)ಜ.9:- ಬಾಲಿವುಡ್ ಚಿತ್ರ ನಿರ್ಮಾಪಕ ರಾಕೇಶ್ ರೋಶನ್ ಕ್ಯಾನ್ಸರ್ ಪೀಡಿತರಾಗಿದ್ದು ಇದೀಗ ಅವರಿಗೆ ನಡೆಸಲಾದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮುಗಿದಿದೆಯಂತೆ.
ಈ ಕುರಿತು ಮಾಹಿತಿ ನೀಡಿದ ಅವರು ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಎರಡು ಮೂರುದಿನಗಳಲ್ಲೇ ಮನೆಗೆ ಹಿಂದಿರುಗುತ್ತೇನೆ. ‘ನಾನು ಚೆನ್ನಾಗಿದ್ದೇನೆ, ಎಲ್ಲರಿಗೂ ಧನ್ಯವಾದಗಳು. ಭಗವಂತನ ಕೃಪೆಯಿದೆ. ಶುಕ್ರವಾರ ಅಥವಾ ಶನಿವಾರ ಮನೆಗೆ ಮರಳುತ್ತೇನೆ’ ಎಂದಿದ್ದಾರಂತೆ. ಕ್ಯಾನ್ಸರ್ ಇದೆ ಎನ್ನುವುದು ತಿಳಿದು ಬಂದಾಗ ಸ್ವಲ್ಪವೂ ವಿಚಲಿತರಾಗದೇ ಅವರು ಪ್ರಫುಲ್ಲಿತರಾಗಿಯೇ ಇದ್ದರು ಎನ್ನಲಾಗಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಅವರ ಪತ್ನಿ, ಸಹೋದರ ಸಂಗೀತಗಾರ ರಾಜೇಶ್ ರೋಶನ್, ಪುತ್ರ ಹೃತಿಕ್, ಪುತ್ರಿ ಸುನೈನಾ ಅವರ ಬಳಿಯೇ ಇದ್ದು ಯೋಗಕ್ಷೇಮ ವಿಚಾರಿಸುತ್ತಿದ್ದಾರಂತೆ. (ಎಸ್.ಎಚ್)