ಸುದ್ದಿ ಸಂಕ್ಷಿಪ್ತ
ಮೇಲ್ವರ್ಗದ ಬಡವರಿಗೂ ಮೀಸಲಾತಿ : ಬ್ರಾಹ್ಮಣ ಸಮಾಜ ಅಭಿನಂದನೆ
ಮೈಸೂರು,ಜ.9 : ಮೇಲ್ವರ್ಗದ ಬಡವರಿಗೂ ಮೀಸಲಾತಿಯನ್ನು ಪ್ರಕಟಿಸಿರುವ ಕೇಂದ್ರ ಸರ್ಕಾರದ ನೀತಿಯನ್ನು ವಿಪ್ರ ಪರಸ್ಪರ ಸಹಾಯ ಸಮಿತಿಯು ಸ್ವಾಗತಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಮೇಲ್ವರ್ಗದವರಿಗೂ ಮೀಸಲಾತಿ ಘೋಷಿಸಿರುವುದರಿಂದ ಆರ್ಥಿಕವಾಗಿ ಹಿಮದುಳಿದ ಬ್ರಾಹ್ಮಣ ಜನಾಂಗ ಹಾಗೂ ಆರ್ಯ ವೈಶ್ಯ ಜನಾಂಗದವರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇ.10ರಷ್ಟು ಮೀಸಲಾತಿ ನೀಡಿರುವುದನ್ನು ಸಮಿತಿ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಹಾಗೂ ಬ್ರಾಹ್ಮಣ ಸಮಾಜ ತುಂಬು ಹೃದಯದಿಂದ ಸ್ವಾಗತಿಸಿ, ಕೇಂದ್ರ ಸರ್ಕಾರವನ್ನು ಮತ್ತು ಪ್ರಧಾನಿಯವರನ್ನು ಅಭಿನಂದಿಸಿದ್ದಾರೆ. (ಕೆ.ಎಂ.ಆರ್)