ಸುದ್ದಿ ಸಂಕ್ಷಿಪ್ತ

ಯುವ ವಿಜ್ಞಾನಿ ಡ್ರೋನ್ ಪ್ರತಾಪ್ ಗೆ ಸನ್ಮಾನ

ಮೈಸೂರು,ಜ.9 : ಕದಂಬ ರಂಗವೇದಿಕೆ ವತಿಯಿಂದ ‘ಯುವ ವಿಜ್ಞಾನಿ ಡ್ರೋನ್ ಪ್ರತಾಪ್’ ಗೆ  ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಜ.12ರ ಬೆಳಗ್ಗೆ 11.30ಕ್ಕೆ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದೆ.

ಸಾಹಿತಿ ಡಾ.ಕಾಳೇಗೌಡ ನಾಗವಾರ ಸನ್ಮಾನ ನಡೆಸುವರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಕದಂಬ ರಂಗ ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ರೋಟರಿ ಮೈಸೂರು ಉತ್ತರ ಅಧ‍್ಯಕ್ಷ  ಎಂ.ಕೆ.ನಂಜಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: