ಪ್ರಮುಖ ಸುದ್ದಿ

ಕಿಡ್ನಿ ಮಾಫಿಯಾಗೆ ಬೆದರಿ ಆತ್ಮಹತ್ಯೆ ಮಾಡಿಕೊಂಡಳಾ ಮಹಿಳೆ ..?

ರಾಜ್ಯ(ಮಂಡ್ಯ)ಜ.10:-  ಸಾಲದ ಬಾಧೆಯಿಂದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.

ಮಳವಳ್ಳಿಯ ಮಲ್ಲಯ್ಯ ಎಂಬವರ ಪತ್ನಿ ವೆಂಕಟಮ್ಮ(48) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ ಕಳೆದ ರಾತ್ರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ವೆಂಕಟಮ್ಮ ಆತ್ಮಹತ್ಯೆಯ ಹಿಂದೆ ಕಿಡ್ನಿ ಮಾರಾಟ ಜಾಲದ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು ಈ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ

ವೃತ್ತಿಯಲ್ಲಿ ತರಕಾರಿ ಮತ್ತು ಸೊಪ್ಪು ಮಾರುತ್ತಿದ್ದ ವೆಂಕಟಮ್ಮ  ಲಕ್ಷ ಲಕ್ಷ ಹಣದ ಆಮಿಷಕ್ಕೆ ಒಳಗಾಗಿದ್ದಳು ಎಂದು ಹೇಳಲಾಗಿದೆ. ತಾರಾ ಎಂಬ ಮಹಿಳೆ ಪರಿಚಯವಾಗಿ ಕಿಡ್ನಿ ಮಾರಾಟ ಮಾಡುವಂತೆ ಸಲಹೆ ನೀಡಿದ್ದು, 1.50 ಲಕ್ಷ ಕಮಿಷನ್ ಹಣ ಮುಂಗಡವಾಗಿ ಪಡೆದುಕೊಂಡಿದ್ದಳು ಎಂದು ಹೇಳಲಾಗಿದೆ.

ವೆಂಕಟಮ್ಮ ಕಿಡ್ನಿ ನೀಡಿದರೆ 10 ಲಕ್ಷ ರೂಪಾಯಿಗಳನ್ನು ನೀಡುವುದಾಗಿ  ಆಮಿಷ ನೀಡಲಾಗಿತ್ತು. ಹೀಗಾಗಿ 10 ಲಕ್ಷದ ಆಸೆಗಾಗಿ 1.50 ಲಕ್ಷ ರೂಪಾಯಿಗಳನ್ನು ಸಾಲ ಮಾಡಿ ಮಧ್ಯವರ್ತಿಗೆ ನೀಡಿದ್ದಳು ಎನ್ನಲಾಗಿದೆ.

ಆದರೆ ಕಿಡ್ನಿ ಆಪರೇಷನ್ ತಡವಾದ ಹಿನ್ನಲೆಯಲ್ಲಿ ಕಮಿಷನ್ ಹಣ ನೀಡಲು ಮಾಡಿದ್ದ ಸಾಲಕ್ಕೆ ಬಡ್ಡಿ ಕಟ್ಟಲಾಗದೇ ಆತ್ಮಹತ್ಯೆ ದಾರಿ ಹಿಡಿದಿದ್ದಾಳೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಸ್ಥಳೀಯ ಮುಖಂಡರು ಮಳವಳ್ಳಿ ಪೊಲೀಸರ ಮೊರೆ ಹೋಗಿದ್ದು, ವೆಂಕಟಮ್ಮನ  ರೀತಿ ಮತ್ತಷ್ಟು ಮಹಿಳೆಯರು ಕಮಿಷನ್ ಹಣವನ್ನು ಮಧ್ಯವರ್ತಿಗೆ ನೀಡಿದ್ದಾರೆ ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ದೂರನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: