ಮೈಸೂರು

ಬಸ್ ಹತ್ತುವ ವೇಳೆ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರ ಅಪಹರಣ

ಮೈಸೂರು,ಜ.10:- ಮಹಿಳೆಯೋರ್ವರು ಬಸ್ ಹತ್ತುತ್ತಿದ್ದಾಗ ಅವರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಯಾರೋ ದುಷ್ಕರ್ಮಿಗಳು ಅಪಹರಿಸಿದ ಘಟನೆ ಚಾಮುಂಡಿ ಬೆಟ್ಟದಲ್ಲಿನ ಬಸ್ ಸ್ಟಾಂಡ್ ನಲ್ಲಿ ನಡೆದಿದೆ.

ಮಂಚಮ್ಮ ಎಂಬವರೇ ಮಾಂಗಲ್ಯ ಸರ ಕಳೆದುಕೊಂಡವರಾಗಿದ್ದಾರೆ. ಈ ಕುರಿತು ಅವರು ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು,  01/01/2019 ರಲ್ಲಿ 14.30 ರ ವೇಳೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ನಂತರ  ಬಸ್ ಸ್ಟ್ಯಾಂಡ್ ಬಳಿ  ಬಂದು ಬಸ್ ಹತ್ತುತ್ತಿದ್ದಾಗ ಜನರ ನೂಕು ನುಗ್ಗಲಿನಲ್ಲಿ ಕತ್ತಿನಲ್ಲಿದ್ದ ಸುಮಾರು 48,000 ರೂ.ಬೆಲೆ ಬಾಳುವ ಚಿನ್ನದ ಮಾಂಗಲ್ಯ ಸರ  ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: