ಪ್ರಮುಖ ಸುದ್ದಿ

ಮಿತಿ ಮೀರಿದ ಕಾಡಾನೆಗಳ ಹಾವಳಿ : ಬೆಳೆ ನಾಶ

ರಾಜ್ಯ(ಹುಬ್ಬಳ್ಳಿ)ಜ.10:- ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಜನತೆ ಭಯದಿಂದಲೇ ದಿನಕಳೆಯುವಂತಾಗಿದೆ.

ಒಂದು ತಿಂಗಳಿಂದ  ಕಾಡಾನೆಗಳ ಹಾವಳಿಯಿಂದಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಹುಲಗಿನಕೊಪ್ಪ ಗ್ರಾಮದಲ್ಲಿ ಕಾಡಾನೆಗಳ ಆರ್ಭಟದಿಂದಾಗಿ ಅಪಾರ ಪ್ರಮಾಣದ ಜಮೀನನಲ್ಲಿ ಬೆಳೆ ನಾಶವಾಗುತ್ತಿದೆ.  20ಕ್ಕೂ ಹೆಚ್ಚು‌ ಆನೆಗಳ ಹಾವಳಿಯಿಂದ ಗ್ರಾಮದಲ್ಲಿ  ಜನರು ಮತ್ತು ರೈತರು ಭಯದಿಂದ ಜೀವನ‌ ನಡೆಸುತ್ತಿದ್ದಾರೆ.

ಮೊದಲೇ ಸಾಲದ ಸುಳಿಯಲ್ಲಿ‌ ಸಿಲುಕಿದ ರೈತರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಕಾಡಾನೆಗಳ ಹಾವಳಿಯನ್ನು ತಡೆಯಲು ರೈತರು ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: