ಮೈಸೂರು

ಮಲೇಶಿಯಾದ 4ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಜಿ ಎಸ್ ಎಸ್ ಎಸ್ ಡಾ.ಪರಮೇಶಾಚಾರಿ-ಮಂಜುಳ.ಜಿ

ಮೈಸೂರು,ಜ.10:- ಜಿ ಎಸ್ ಎಸ್ ಎಸ್  ಇನ್ಸ್ಟಿಟ್ಯೂಟ್  ಆಫ್  ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ  ಫಾರ್  ವಿಮೆನ್, ಮೈಸೂರಿನ  ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ, ಮುಖ್ಯಸ್ಥರಾದ ಡಾ.ಪರಮೇಶಾಚಾರಿ  ಬಿ  ಡಿ ಅವರನ್ನು  ಜ. 19   ರಿಂದ   21ರವರೆಗೆ   ಮಲೇಶಿಯಾದ ಮಲಯಾ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 4ನೇ ಅಂತರರಾಷ್ಟ್ರೀಯ ಸಮ್ಮೇಳನ (ಇಂಟರ್ನ್ಯಾಷನಲ್  ಕಾನ್ಫರೆನ್ಸ್  ಆನ್  ಮಲ್ಟಿಮೀಡಿಯಾ  ಅಂಡ್  ಇಮೇಜ್  ಪ್ರೊಸೆಸಿಂಗ್- ಐ.ಸಿ.ಮ್.ಐ.ಪಿ-2019) ವನ್ನು ಉದ್ದೇಶಿಸಿ ಅತಿಥಿ ಭಾಷಣ ನೀಡಲು ಆಹ್ವಾನಿಸಿದ್ದಾರೆ.

ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಮಂಜುಳ.ಜಿ ಅವರು ಇದೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ತಮ್ಮ ಸಂಶೋಧನೆಗೆ ಸಂಬಂಧಿಸಿದ -“ಅಡಾಪ್ಟಿವ್  ಓಪ್ಟಿಮಿಜೇಶನ್  ಬೇಸ್ಡ್  ನ್ಯೂರಲ್  ನೆಟ್ವರ್ಕ್  ಫಾರ್  ಕ್ಲಾಸಿಫಿಕೇಶನ್  ಆ ಫ್   ಸ್ಟುಟ್ಟರ್ಡ್  ಸ್ಪೀಚ್”  ಲೇಖನವನ್ನು ಮಂಡಿಸಲಿದ್ದಾರೆ.

ಡಾ.ಪರಮೇಶಾಚಾರಿ  ಬಿ  ಡಿ ಅವರು 65 ಕ್ಕೂ ಹೆಚ್ಚು ಲೇಖನವನ್ನು ಪ್ರಕಟಿಸಿದ್ದು 103 ಕ್ಕೂ ಹೆಚ್ಚು ಲೇಖನಗಳು ಉಲ್ಲೇಖಗೊಂಡಿವೆ. ಜಿ ಎಸ್ ಎಸ್ಎ ಸ್  ಇನ್ಸ್ಟಿಟ್ಯೂಟ್  ಆಫ್  ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ  ಫಾರ್  ವಿಮೆನ್, ಮೈಸೂರು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಜುಳ.ಜಿ ಅವರು ತಮ್ಮ ಪಿ.ಹೆಚ್ ಡಿ ಮುಂದುವರಿಸುತ್ತಿದ್ದಾರೆ. (ಎಸ್.ಎಚ್)

Leave a Reply

comments

Related Articles

error: