ಪ್ರಮುಖ ಸುದ್ದಿಮೈಸೂರು

24ವರ್ಷಗಳ ಕಾಲ ದುಡಿಸಿಕೊಂಡ ಬನುಮಯ್ಯ ಕಾಲೇಜು : ಅಧ‍್ಯಾಪಕ ರಮೇಶ್ ಹೇಳಿದ್ದೇನು ?

ಮೈಸೂರು,ಜ.10 : ತಮ್ಮ ವಿರುದ್ಧ ಹೇರಿರುವ ನಿರಾಪೇಕ್ಷಣೆಯನ್ನು ರುದ್ದುಗೊಳಿಸಿ ಸೇವೆಯನ್ನು ಖಾಯಂಗೊಳಿಸಬೇಕೆಂದು ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ಉಪನ್ಯಾಸಕರಾದ ಡಾ.ಎಸ್.ಕೆ.ರಮೇಶ್ ಅವರು ಕಾಲೇಜು ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಡಿ.ಬನುಮಯ್ಯ ಕಾಲೇಜಿನಲ್ಲಿ 1994ರಿಂದಲೂ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು ಖಾಯಂ ಗೊಳಿಸುವ ಎಲ್ಲಾ ಅರ್ಹತೆಗಳಿದ್ದರು ತಮ್ಮನ್ನು ನಿರ್ಲಕ್ಷಿಸಿ ಕನ್ನಡ ವಿಭಾಗಕ್ಕೆ ಬೇರೆ ಕಾಲೇಜಿನ ಉಪನ್ಯಾಸಕರುಗಳಿಗೆ ಎನ್.ಓ.ಸಿ. ನೀಡಿ ಡೆಪ್ಯೂಟೇಷನ್ ವರ್ಗಾವಣೆಗೆ ಅವಕಾಶ ಕಲ್ಪಿಸಿಕೊಟ್ಟು ತಮ್ಮನ್ನು ಅತಂತ್ರಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅರೆ ಕಾಲಿಕೆ ಅಧ್ಯಾಪಕನಾಗಿ ಸೇವೆ ಸಲ್ಲಿಸುವಾಗ ಬೇರೆ ಕಾಲೇಜುಗಳಲ್ಲಿಯೂ ಕೆಲಸ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಿ ಸಹಿ ಮಾಡಿಸಿಕೊಂಡು ಪೂರ್ಣಕಾಲಿಕ ಅಧ್ಯಾಪಕರನ್ನಾಗಿ ಮಾಡಿದ್ದರು, ಆದರೀಗ ತಮ್ಮ ಸ್ಥಾನಕ್ಕೆ ಇನ್ನೊಬ್ಬರಿಗೆ ಅವಕಾಶ ನೀಡಿದೆ. ತಮಗೆ ವಾರದಲ್ಲಿ 4 ಗಂಟೆಗಳ ಕಾರ್ಯಭಾರ ನಿಗದಿಗೊಳಿಸಿ ಕೇವಲ 3 ಸಾವಿರ ಸಂಬಳ ನೀಡುತ್ತಿದ್ದು ಇದರಿಂದ ತಮ್ಮ ಕುಟುಂಬವು ವಿಷಮ ಸ್ಥಿತಿ ಎದುರಿಸುವಂತಾಗಿದೆ ಎಂದು ದೂರಿದ್ದಾರೆ.

ಕಾಲೇಜಿನಲ್ಲಿ 24 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದು ತಮಗೆ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ಕಾಲೇಜಿನ ಮುಂದೆ ಧರಣಿ ಸತ್ಯಾಗ್ರಹ ಹಕ್ಕೊತ್ತಾಯದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದು ಈ ಕುರಿತಂತೆ ರಾಷ್ಟ್ರಪತಿಗಳಿಗೆ, ರಾಜ್ಯಪಾಲರಿಗೆ, ಯುಜಿಸಿ, ಹೆಚ್.ಆರ್.ಡಿ. ಉನ್ನತ ಶಿಕ್ಷಣ ಸಚಿವರಿಗೆ ಸಂಬಂಧಿಸಿದವರಿಗೆ ಪತ್ರ ಬರೆಯಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: