ಲೈಫ್ & ಸ್ಟೈಲ್

ಮಾಸಿಕ ಋತುಚಕ್ರದ ಕಿರಿಕಿರಿ ತಪ್ಪಿಸಿ, ರಿಲ್ಯಾಕ್ಸ್ ಆಗಿರಿ

ಮಹಿಳೆಯರು ತಮ್ಮ ಮಾಸಿಕ ಋತುಚಕ್ರದ ಸಮಯದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಲವು ತೊಂದರೆಗಳಿಂದ ಬಳಲುತ್ತಿರುತ್ತಾರೆ. ಈ ಅವಧಿಯಲ್ಲಿ ಅಧಿಕ ಸ್ರಾವ, ನಿಶ್ಯಕ್ತಿ, ಹೊಟ್ಟೆನೋವು, ಹಾರ್ಮೋನ್ ಅಸಮತೋಲನ, ಹೀಗೆ ಹತ್ತು ಹಲವು ಸಮಸ್ಯೆಗಳು ಅವರನ್ನು ಬಾಧಿಸುತ್ತಿರುತ್ತದೆ. ಅಂತಹ ಸಮಯದಲ್ಲಿ ರಿಲ್ಯಾಕ್ಸ್ ಆಗಿರಲು ಇಲ್ಲಿದೆ ಕೆಲವು ಸಲಹೆ:

chocolateಚಾಕಲೇಟ್: ಚಾಕಲೇಟ್ ಸೇವಿಸುವುದರಿಂದ ಮ್ಯಾಗ್ನಿಶಿಯಂ ಮತ್ತು ಎಂಡಾಫ್ರಿನ್ಸ್ ಜೊತೆ ಇದರಲ್ಲಿ ಐರನ್ ಸಹ ಇರುತ್ತದೆ. ನೋವಿನಿಂದ ಮುಕ್ತಿ ಪಡೆಯಬಹುದು. ಶಕ್ತಿ ಸಿಗುತ್ತದೆ. ಮನಸ್ಸು ನಿರ್ಮಲವಾಗಿರುತ್ತದೆ.

ಗ್ರೀನ್ ಟೀ: ಸೇವಿಸುವುದರಿಂದ ರಕ್ತದ ಹರಿವು ಚನ್ನಾಗಿರುತ್ತದಲ್ಲದೇ ಮಾಂಸಖಂಡಗಳ ನೋವಿನಿಂದ ಮುಕ್ತಿ ಪಡೆಯಬಹುದು.green-tea

ಪಪ್ಪಾಯ: ಇದರಲ್ಲಿರುವ ಕೆರೊಟಿನ್, ಐರನ್, ಕ್ಯಾಲ್ಶಿಯಂ ಮತ್ತು ವಿಟಾಮಿನ್ ಗಳು ನೋವನ್ನು ತಡೆದು ನಿಶ್ಯಕ್ತಿ ಹೊಡೆದೋಡಿಸಿ, ಶಕ್ತಿ ತುಂಬುತ್ತದೆ. ಇದರಿಂದ ಜೀರ್ಣಕ್ರಿಯೆಯು ಸರಾಗವಾಗಿ ನಡೆಯುತ್ತದೆ.

bananaಬಾಳೆಹಣ್ಣು: ಇದರಲ್ಲಿ ಪೊಟ್ಯಾಶಿಯಂ,ಮ್ಯಾಗ್ನಿಶಿಯಂ ಜೊತೆ ಮೆಲಾಟೋನಿನ್ ಹೇರಳವಾಗಿರುತ್ತದೆ. ಇದರಿಂದ ಮನಸ್ಸು ನಿರಾಳವಾಗಿರುತ್ತದೆ. ನೋವು ಮಾಯವಾಗಿ ಓಳ್ಳೆಯ ನಿದ್ರೆ ಬರುತ್ತದೆ.

ಬಿಸಿಹಾಲು: ಇದರಲ್ಲಿ ಕ್ಯಾಲ್ಶಿಯಂ ಮತ್ತು ಮಿನರಲ್ಸ್ ಜೊತೆ ಐರನ್ ಇದ್ದು ನಿಶ್ಯಕ್ತಿ, ನೋವನ್ನು ಕಡಿಮೆ ಮಾಡಿ ರಕ್ತದ ಕೊರತೆಯನ್ನು ನೀಗಿಸುತ್ತದೆ. milk-300x194

ಡ್ರೈಫ್ರುಟ್ಸ್:ಇದರಲ್ಲಿ ಕ್ಯಾಲ್ಶಿಯಂ ಇರುತ್ತದೆ. ಪ್ರೊಬಯೊಟಿಕ್ಸ್ ಹೇರಳವಾಗಿರುತ್ತದೆ. ಇದು ಮಾಂಸಖಂಡಗಳನ್ನು ನೋವಿನಿಂದ ಮುಕ್ತಿಗೊಳಿಸುತ್ತದೆ.

palak-leavesಹಸಿರುತರಕಾರಿ: ಪಾಲಕ್, ಮೇಂತೆ ಸೊಪ್ಪು, ಎಲೆಕೋಸು ಇವುಗಳನ್ನು ಆಹಾರದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ವಿಟಾಮಿನ್ ಗಳು ದೊರಕುತ್ತವೆ. ರಕ್ತ ಹೀನತೆ ಕಡಿಮೆ ಆಗುತ್ತದೆ.

ಇವುಗಳನ್ನು ಋತುಚಕ್ರದ ಸಮಯಕ್ಕೆ ಒಂದು ವಾರ ಮೊದಲಿನಿಂದಲೇ ಸೇವಿಸಲು ಆರಂಭಿಸಿದರೆ ನೆಮ್ಮದಿಯಿಂದಿರಲು ಸಾಧ್ಯ.

Leave a Reply

comments

Related Articles

error: