ಪ್ರಮುಖ ಸುದ್ದಿ

ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ಮಕ್ಕಳಿಗೆ ಪ್ರವಾಸ : ಕೆ.ಎಸ್.ಮಹದೇವಸ್ವಾಮಿ

ರಾಜ್ಯ(ಚಾಮರಾಜನಗರ)ಜ.11:- ಚಾಮರಾಜನಗರ ಜಿಲ್ಲೆಯ 250 ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ತಾಲೂಕಿನಿಂದ 50 ಮಕ್ಕಳಂತೆ ಜಿಲ್ಲೆಯ 5 ತಾಲೂಕಿನ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಉಪ್ಪಾರಬೀದಿ ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಎಸ್.ಮಹದೇವಸ್ವಾಮಿ ತಿಳಿಸಿದರು.

ಚಾಮರಾಜನಗರ ತಾಲೂಕಿನ ಉಪ್ಪಾರಬೀದಿ ಶಾಲೆಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ನ 50 ಮಕ್ಕಳನ್ನು ದಕ್ಷಿಣ ಕರ್ನಾಟಕ ಜಿಲ್ಲೆಯ ಪ್ರವಾಸಕ್ಕೆ ಕೆರೆದು ಕೊಂಡು ಹೋಗಲಾಗುತ್ತಿದೆ. ಮಕ್ಕಳಿಗೆ ಶಿಸ್ತಿನಿಂದ ಪ್ರವಾಸವನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ತಿಳಿಸಿದರು

ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಆಯುಕ್ತರಾದ ಡಾ.ಶ್ವೇತ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಶಿಸ್ತನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಪ್ರವಾಸದಲ್ಲಿ ನಿಮ್ಮ ಪಠ್ಯ ಪುಸ್ತಕಗಳಲ್ಲಿ ಇರುವ ಚರಿತ್ರಗಳ ಬಗ್ಗೆ ತಿಳಿಯಬಹುದು ಎಷ್ಟೋ ವಿದ್ಯಾರ್ಥಿಗಳು ಪ್ರವಾಸ ಮಾಡುವುದಕ್ಕೆ ಅವರ ಮನೆಯ ಪರಿಸ್ಥಿತಿಯಲ್ಲಿ ಕಷ್ಟವಿರುತ್ತದೆ. ಇದು ಕೆಲವು ವಿದ್ಯಾರ್ಥಿಗಳಿಗೆ ಸಿಗುವ ಅವಕಾಶವಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ವೆಂಕಟನಾಗಪ್ಪಶೆಟ್ಟಿ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಬ್ಯಾಗ್, ಟೀಶರ್ಟ್, ಕ್ಯಾಪ್ ವಿತರಿಸಿ ಮಾತನಾಡುತ್ತ ಪ್ರವಾಸ ದಿಂದ ನಮ್ಮ ತಾಲೂಕಿನ ವಿದ್ಯಾರ್ಥಿಗಳಿಗೆ ಬೇರೆ ತಾಲೂಕಿನ ವಿದ್ಯಾರ್ಥಿಗಳ ಸ್ನೇಹ ಬೆಳೆಯುತ್ತದೆ. ಈ ಸ್ನೇಹವೂ ಉತ್ತಮ ರೀತಿಯಲ್ಲಿ ಬೆಳೆಯ ಬೇಕು. ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಕರ್ನಾಟಕ ದರ್ಶನ ಪ್ರವಾಸವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆಗೆ ಪ್ರವಾಸದ ಅನುಭವವನ್ನು ತುಂಬುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸ್ವೌಟ್ಸ್ ಮತ್ತು ಗೈಡ್ಸ್ ನ ಶಿಕ್ಷಕರಾದ ಭೋಗನಂಜಪ್ಪ, ಸಿದ್ದಲಿಂಗಸ್ವಾಮಿ, ಜ್ಯೋತಿ, ರಾಮಚಂದ್ರ, ವಸಂತಕುಮಾರಿ, ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: