ಪ್ರಮುಖ ಸುದ್ದಿ

ರಾಮ್ ಚರಣ್ ತೇಜ್ ಅಭಿನಯದ ‘ವಿನಯ ವಿಧೇಯ ರಾಮ್’ ಚಿತ್ರ ಪ್ರದರ್ಶನಕ್ಕೆ ತಡೆ

ರಾಜ್ಯ(ಚಿಕ್ಕಬಳ್ಳಾಪುರ)ಜ.11:-  ತೆಲುಗು ಭಾಷೆಯ ಚಿತ್ರ ‘ವಿನಯ ವಿಧೇಯ ರಾಮ್’ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ.

ಚಿರಂಜೀವಿ ಪುತ್ರ ರಾಮ್ ಚರಣ್ ತೇಜ್ ಅಭಿನಯದ ಚಿತ್ರವಿದಾಗಿದ್ದು, ಚಿಕ್ಕಬಳ್ಳಾಪುರ ನಗರದ ಕೃಷ್ಣಾ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ. ‌ಪೊಲೀಸರು ಮೊದಲ ಫ್ಯಾನ್ಸ್ ಶೋ ಗೆ ಬ್ರೇಕ್ ಹಾಕಿದ್ದು, ಹೆಚ್ಚುವರಿ ಪ್ರದರ್ಶನಕ್ಕೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ತಡೆಯೊಡ್ಡಿದ್ದಾರೆ. ಬೆಳಿಗ್ಗೆ 6 ಗಂಟೆ 30 ನಿಮಿಷಕ್ಕೆ ನಿಗದಿಯಾಗಿದ್ದ ಫ್ಯಾನ್ಸ್ ಶೋ ಗೆ ತಡೆಯೊಡ್ಡಿದ್ದು, ಮುಂಜಾನೆ 3 ಹಾಗೂ 4 ಗಂಟೆಗೆ ಪ್ರೇಕ್ಷಕರು ಬಂದು ಕಾತುರದಿಂದ ಕಾದಿದ್ದರು. ಚಿತ್ರಪ್ರದರ್ಶನಕ್ಕೆ ತಡೆ ಹಿನ್ನೆಲೆಯಲ್ಲಿ ರಾಮ್ ಚರಣ್ ಅಭಿಮಾನಿಗಳಿಗೆ‌ ಭಾರೀ ನಿರಾಸೆಯಾಗಿದೆ. ಅಭಿಮಾನಿಗಳು ತಲಾ 150-200 ರೂಪಾಯಿ ಕೊಟ್ಟು ಟಿಕೇಟ್ ಖರೀದಿಸಿದ್ದರು. ಇದು ಇಂದು‌ ಬಿಡುಗಡೆ ಆಗಿರುವ ಬಹು ನಿರೀಕ್ಷಿತ ವಿವಿಆರ್ ಸಿನಿಮಾ ಆಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: