ಪ್ರಮುಖ ಸುದ್ದಿ

ವಿದ್ಯುತ್ ಸ್ಪರ್ಶಿಸಿ ಪೈಂಟರ್ ಸಾವು

ರಾಜ್ಯ(ಮಂಡ್ಯ)ಜ.11:- ಕಾಲೇಜೊಂದರಲ್ಲಿ ಪೇಂಟಿಂಗ್ ಮಾಡುವ ಸಂದರ್ಭ ವಿದ್ಯುತ್ ಸ್ಪರ್ಶಿಸಿ ಪೈಂಟರ್ ಓರ್ವರು ಮೃತಪಟ್ಟ ಘಟನೆ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದಿದೆ.

ಮೃತರನ್ನು ಕೆ ಆರ್ ಪೇಟೆ ತಾಲೂಕಿನ ಭಾರತೀಪುರ ಗ್ರಾಮದ ಮಂಜಯ್ಯ ನವರ ಮಗ ಹರ್ಷನ್ ಬಿ ಎಂ.( 24) ಎಂದು ಗುರುತಿಸಲಾಗಿದೆ. ಇವರು ಕೆ ಆರ್ ಪೇಟೆ ಪದವಿ ಪೂರ್ವ ಕಾಲೇಜಿನಲ್ಲಿ  ಹೊಟ್ಟೆ ಪಾಡಿಗೆ ಪೈಂಟರ್ ಆಗಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಇಂದು ಪದವಿ ಪೂರ್ವ ಕಾಲೇಜಿ ನಲ್ಲಿ 11 ಗಂಟೆಯ ಸಮಯದಲ್ಲಿ ಕೆಲಸ ಮಾಡುತ್ತಿದ್ದಾಗ ಕೊಠಡಿ ಹೊಳಗೆ ವಿದ್ಯುತ್ ಸ್ಪರ್ಶಿಸಿ ಅಲ್ಲೇ ಸಾವನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: