ಮನರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ `ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಜೋಡಿ

ಬೆಂಗಳೂರು,ಜ.11-ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದ ಜೋಡಿಗಳು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೆಗೌಡ ಹಾಗೂ ದಿವ್ಯ ಹಸೆಮಣೆ ಏರುತ್ತಿದ್ದಾರೆ. ಗೋವಿಂದೆ ಗೌಡ ಹಾಗೂ ದಿವ್ಯ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ಮನೆಯವರ ಒಪ್ಪಿಗೆ ಪಡೆದು ಸತಿ-ಪತಿಯಾಗಲು ಮುಂದಾಗಿದ್ದಾರೆ.

ಜ.27 ರಂದು ನಿಶ್ಚಿತಾರ್ಥ ಬೆಂಗಳೂರಿನಲ್ಲಿ ನಡೆಯಲಿದ್ದು, ಮಾರ್ಚ್ 14 ರಂದು ಇಬ್ಬರು ಶೃಂಗೇರಿಯಲ್ಲಿ ಶಾರದಾಂಬೆಯ ಆರ್ಶೀವಾದ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ನಂತರ ದಿವ್ಯ ಮತ್ತು ಗೋವಿಂದೆ ಗೌಡ ಇಬ್ಬರೂ ಅನೇಕ ಸಿನಿಮಾ ಅವಕಾಶಗಳನ್ನು ಪಡೆದರು. ದಿವ್ಯ ಸದ್ಯ ‘ಪುಣ್ಯಾತ್ ಗಿತ್ತೀಯರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗೋವಿಂದೆ ಗೌಡ ಅವರು ‘ಕೆಜಿಎಫ್’ ಬಳಿಕ ‘ಭರಾಟೆ’ ಸೇರಿದಂತೆ ಸಾಕಷ್ಟು ಚಿತ್ರಗಳ ಅವಕಾಶ ಪಡೆದಿದ್ದಾರೆ. ಅಲ್ಲದೆ, ಜೀ ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಧಾರಾವಾಹಿಯಲ್ಲೂ ಅಭಿನಯಿಸುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: