ಪ್ರಮುಖ ಸುದ್ದಿಮೈಸೂರು

ಅಂಧ ವಿದ್ಯಾರ್ಥಿಗಳ ವಸತಿ ನಿಲಯದ ಸಹಾಯಾರ್ಥ “ರಸ ಸಂಜೆ’ ಸಂಗೀತ ಕಾರ್ಯಕ್ರಮ

ಮೈಸೂರು,ಜ.11 : ನಗರದ ಸಹನಾ ಅಂಗವಿಕಲ ಸೇವಾ ಪ್ರತಿಷ್ಟಾನದಿಂದ ಅಂಧ ವಿದ್ಯಾರ್ಥಿಗಳ ಸಹಾಯಾರ್ಥ ಫೆ.16ರಂದು ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ವಿ.ನರಸಿಂಹಯ್ಯ ತಿಳಿಸಿದರು.

ಸಮಾನ ಮನಸ್ಕ ಐವರು ದೃಷ್ಟಿ ವಿಕಲಚೇತನರಿಂದ ಕಳೆದ ಹದಿನೆಂಟು ವರ್ಗಗಳ ಹಿಂದೆ ಸರಸ್ವತಿಪುರಂನಲ್ಲಿ ಸ್ಥಾಪಿನೆಯಾದ ಪ್ರತಿಷ್ಟಾನದ ವತಿಯಿಂದ ಅಂಧ ಶ್ರೇಯೋಭಿವೃದ್ಧಿ ಹಾಗೂ ಮುಖ್ಯವಾಹಿನಿಗೆ ತರಲು ಅಗತ್ಯವಿರುವ ಪಠ್ಯಪುಸ್ತಕಗಳನ್ನು ಬ್ರೈಲ್ ಲಿಪಿಗೆ ತರ್ಜುಮೆಗೊಳಿಸಿ ರಾಜ್ಯಾದ್ಯಂತ ವಿತರಿಸಲಾಗುತ್ತಿದೆ, ಅದರಂತೆ  ಗ್ರಾಮಾಂತರ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆಂದೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಉಚಿತ ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ತಲಾ 25 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರ ನಿರ್ವಹಣೆಗೆ ಆರ್ಥಿಕ ಮುಗ್ಗಟ್ಟು ಉಂಟಾಗಿದ್ದು ಇದಕ್ಕೆಂದು ಈ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮೈಸೂರು ವಿವಿಯ ಸೆನೆಟ್ ಭವನದಲ್ಲಿ ಅಂದು ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾವಗೀತೆ, ಭಕ್ತಿಗೀತೆ, ಜಾನಪದ ಸೇರಿದಂತೆ ಚಲನಚಿತ್ರ ಗೀತೆಗಳನ್ನು ಅಂಧ ಕಲಾವಿದರು ಹಾಡಲಿದ್ದು, ಪ್ರತಿ ಟಿಕೆಟ್ ಗೆ ನೂರು ರೂ.ಗಳನ್ನು ನಿಗದಿಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ಪ್ರಾಯೋಜಿಸಲು ಇಚ್ಚಿಸುವ ಕಂಪನಿ/ತಂಡಗಳ ಲೋಗೊಗಳನ್ನು ಭಿತ್ತಿಪತ್ರಗಳಲ್ಲಿ ಬಿತ್ತರಿಸಲಾಗುವುದು. ಮಾಹಿತಿಗಾಗಿ ಮೊ.ಸಂ. 94480 16501, 76766 96252 ಇಲ್ಲಿ ಸಂಪರ್ಕಿಸಬಹುದೆಂದು ತಿಳಿಸಿದರು.

ಟ್ರಸ್ಟಿ ಹಾಲಪ್ಪ ಶೆಟ್ಟಿ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: