ಕರ್ನಾಟಕ

ಈ ವರ್ಷ ಸಿಇಟಿ ಆನ್ ಲೈನ್ ಪರೀಕ್ಷೆ ಇಲ್ಲ

ಬೆಂಗಳೂರು (ಜ.11): ಆನ್’ಲೈನ್’ನಲ್ಲಿ ಪರೀಕ್ಷೆ ನಡೆಸಲು ಈ ವರ್ಷ ಸಂಪೂರ್ಣ ಸಜ್ಜಾಗಿಲ್ಲದ ಕಾರಣ ಈ ವರ್ಷ ಸಾಮಾನ್ಯ ಪ್ರವೇಶ ಪರೀಕ್ಷೆ -ಸಿಇಟಿ ಆನ್’ಲೈನ್’ನಲ್ಲಿ ಇರುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

2019ರ ಸಿಇಟಿ ಪರೀಕ್ಷೆ ಆನ್’ಲೈನ್’ನಲ್ಲಿ ನಡೆಸಲಾಗುವುದು ಎಂದು ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಹೇಳಿದ್ದರು. ಆದರೂ ಆನ್’ಲೈನ್’ನಲ್ಲಿ ಪರೀಕ್ಷೆ ಮಾಡಲು ಸಮಯಾವಕಾಶ ಬೇಕಾಗಿದೆ ಎಂದು ಹೇಳಿದ್ದರು. ಜ.19ರಂದು ಭೇಟಿಯಾಗಿ ಸಭೆ ನಡೆಸಲಿದ್ದು ಅಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಆನ್’ಲೈನ್’ನಲ್ಲಿ ಪರೀಕ್ಷೆ ನಡೆಸಲು ಪ್ರಕ್ರಿಯೆಗಳು ನಡೆಯುತ್ತಿದ್ದು ಇದಕ್ಕೆ ಸಾಫ್ಟ್’ವೇರ್ ಅನ್ನು ಸಿದ್ಧಪಡಿಸುತ್ತಿದ್ದರೂ ಕೂಡ ಹಲವು ಬಾರಿ ಪ್ರಾಯೋಗಿಕ ಅಣಕು ಪರೀಕ್ಷೆ ನಡೆಸಿದ ನಂತರವಷ್ಟೇ ಪರೀಕ್ಷೆ ನಡೆಸಲು ಸಾಧ್ಯ. ಒಂದೇ ಸಲಕ್ಕೆ ವಿದ್ಯಾರ್ಥಿಗಳ ಮೇಲೆ ಹೇರಲು ಸಾಧ್ಯವಿಲ್ಲ. ಏಕೆಂದರೆ ಬಹುತೇಕ ಮಂದಿ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದಾರೆ. 2020 ರಿಂದ ಆನ್‍’ಲೈನ್ ಪರೀಕ್ಷೆ ನಡೆಸಬಹುದಾಗಿದೆ ಎಂದು ಕೆಇಎ ಮೂಲಗಳು ತಿಳಿಸಿವೆ. (ಎನ್.ಬಿ)

Leave a Reply

comments

Related Articles

error: