ಕರ್ನಾಟಕ

ಯಾರೇನೇ ಮಾಡಿದರೂ ಬ್ರಿಗೇಡ್ ಶಕ್ತಿಯಾಗಿ ಬೆಳೆಯಲಿದೆ : ಕೆ.ಎಸ್.ಈಶ್ವರಪ್ಪ ವಿಶ್ವಾಸ

ಬಿಜೆಪಿ ಅಧಿಕಾರಕ್ಕೆ ಬರಬೇಕು. ಯಡಿಯೂರಪ್ಪ ಮುಖ್ಯಮಂತ್ರಿ ಅಗಬೇಕು ಎನ್ನುವುದು ನನ್ನ ವೈಯುಕ್ತಿಕ ಆಸೆಯಾಗಿದ್ದು,  ರಾಯಣ್ಣ ಬ್ರಿಗೇಡ್ ಬೆಂಬಲದಿಂದ ನಾನು ಮುಖ್ಯಮಂತ್ರಿಯಾಗುವುದು ಬೇಕಿಲ್ಲ ಎಂದು ಹೇಳಿದ್ದು, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಅನೇಕ ಮಠಾಧೀಶರು ತನಗೆ ಸಲಹೆ ನೀಡಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಜ.26ರಂದು ಕೂಡಲಸಂಗಮದಲ್ಲಿ ರಾಯಣ್ಣ ಬ್ರಿಗೇಡ್ ಸಮಾವೇಶ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪ ಮಾತನಾಡಿದರು.  ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತೇವೆ. ಆದರೆ ಪಕ್ಷದಲ್ಲಿ ಶಿಸ್ತು ಮಾಯವಾಗಿದೆ. ಬ್ರಿಗೇಡ್ ನ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ ಅವರನ್ನು ಪಕ್ಷದಲ್ಲಿನ ಶಿಸ್ತು ಸಮಿತಿ ಬದಲು ಬೆಂಗಳೂರು ನಗರ ಘಟಕದ ಅಧ್ಯಕ್ಷರ ಮೂಲಕ ಅಮಾನತು ಮಾಡಿಸಿರುವುದು ಹಿಂದುಳಿದವರಿಗೆ ಮಾಡಿರುವ ಅವಮಾನ ಎಂದು ಕಿಡಿಕಾರಿದರು.

ಪಕ್ಷಕ್ಕಾಗಿ ಬೆವರು ಸುರಿಸಿ, ರಕ್ತಹರಿಸಿ ಹಲವಾರು ವರ್ಷಗಳಿಂದ ದುಡಿದವರನ್ನು ಈ ರೀತಿ ಅಮಾನತಿಗೆ ಗುರಿಪಡಿಸುವುದು ಸರಿಯಲ್ಲ. ಬ್ರಿಗೇಡ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಯಾರನ್ನೇ ಅಮಾನತು ಮಾಡಿದರೂ ಎದೆಗುಂದುವುದು ಬೇಡ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಉತ್ತಮ ಸ್ಥಾನಗಳು ಲಭಿಸಲಿದೆ ಎಂದು ತಿಳಿಸಿದರು.

ಯಾರೇನೇ ಮಾಡಿದರೂ ಬ್ರಿಗೇಡ್ ಶಕ್ತಿಯಾಗಿ ಬೆಳೆಯಲಿದೆ. ವೆಂಕಟೇಶ್ ಮೂರ್ತಿ ವಿರುದ್ಧ ಕ್ರಮಕೈಗೊಂಡರೆ ಹೆದರುತ್ತಾರೆ ಬರುವುದಿಲ್ಲ ಎಂದುಕೊಂಡಿದ್ದರು ಆದರೆ ಅದು ಸುಳ್ಳಾಗಿದೆ. ಎಲ್ಲ ಸಮುದಾಯದವರೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಒಪ್ಪಿದ್ದಾರೆ ನಾವು ಹಿಂಜರಿಯುವ ಅಗತ್ಯವೇ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

comments

Related Articles

error: