ಪ್ರಮುಖ ಸುದ್ದಿಮೈಸೂರು

ನಾಳೆಯಿಂದ 18ರವರೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ‘ಬಹುರೂಪಿ’ಯ ಕಲರವ

ಕಲಾಸಕ್ತರಿಗೆ ಪುಷ್ಕಳಭೂರಿ ಭೋಜನಾ

ಮೈಸೂರು,ಜ.11 : ರಂಗಕಲಾಸಕ್ತರ ಬಹು ನಿರೀಕ್ಷಿತ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2019. ‘ಲಿಂಗ ಸಮಾನತೆ’ ಆಶಯದೊಂದಿಗೆ ನಡೆಯುವ ನಾಟಕೋತ್ಸವವನ್ನು ಹಿರಿಯ ರಂಗಕರ್ಮಿ ಪ್ರಸನ್ನ ಅವರು ಜ.12ರಂದು ಸಂಜೆ 6ಕ್ಕೆ ರಂಗಾಯಣದ ವನರಂಗದಲ್ಲಿ ಚಾಲನೆ ನೀಡಲಿದ್ದಾರೆ.

ಬಳಿಕ ಕೆ.ಜಿ.ಮಹಾಬಲೇಶ್ವರ ನಿರ್ದೇಶನದ ‘ಶ್ರೀರಾಮಾಯಣ ದರ್ಶನಂ’ ನಾಟಕ ಪ್ರದರ್ಶನ ನಡೆಯಲಿದೆ.

ದಿ.13ರಂದು ನಡೆಯುವ ನಾಟಕಗಳ ಪ್ರದರ್ಶನ ವಿವರ :

ದಿ.13 ರಂದು ಕಿರುರಂಗ ಮಂದಿರದಲ್ಲಿ ಸಂ.6 ಗಂಟೆ ಡಾ.ಮಿಲಿಂದ್ ನಿರ್ದೇಶನದ ‘ಏಕ ಧೋತರಾಚಿ ಗೋಷ್ಟಾ’(ಮರಾಠಿ) ನಾಟಕ ಪ್ರದರ್ಶನ,

ಭೂಮಿಗೀತದಲ್ಲಿ ಸಂಜೆ 6.30 ಕ್ಕೆ ಮಂಗಳಾ ನಿರ್ದೇಶನದ ‘ಶ್ರೀದೇವಿ ಮಹಾತ್ಮೆ’(ಕನ್ನಡ),

ವನರಂಗದಲ್ಲಿ ಸಂ.7 ಗಂಟೆಗೆ ರೆಜಿನ್ ರೋಸ್ ನಿರ್ದೇಶನದ ‘1084ಎಸ್ ಮದರ್’(ತಮಿಳು),

ಕಲಾಮಂದಿರದಲ್ಲಿ ರಾತ್ರಿ 8 ಗಂಟೆಗೆ ಪ್ರಶಾಂತ್ ನಾರಾಯಣನ್ ನಿರ್ದೇಶನದ ‘ಮಹಾಸಾಗರಂ’(ಮಲಯಾಳಂ) ನಾಟಕದ ಪ್ರದರ್ಶನ ನಡೆಯಲಿವೆ.

ಕಿರುರಂಗ ಮಂದಿರನಿತ್ಯ ಸಂಜೆ 6ಕ್ಕೆ ನಾಟಕ ಪ್ರದರ್ಶನ.

ದಿ. 13ರಂದು ಡಾ.ಮಿಲಿಂದ್ ನಿರ್ದೇಶನದ ‘ಏಕ ಧೋತರಾಚಿ ಗೋಷ್ಟಾ’(ಮರಾಠಿ),

ದಿ.14.ರಂದು ಸ್ವಾತಿ ದುಬೆ ನಿರ್ದೇಶನದ ‘ಅಗರ್‌ಬತ್ತಿ’(ಹಿಂದಿ),

ದಿ.15ರಂದು ಮುಕುಂದ ನಿಂಗಣ್ಣವರ್ ನಿರ್ದೇಶನದ ‘ಧರ್ಮಪತ್ರ’(ಕನ್ನಡ),

ದಿ.16ರಂದು ಚನಮ್ ನಿಲ್ಲಾಬಿರ ನಿರ್ದೇಶನದ ‘ಮಲೇಮ್‌ಙನ್‌ಬಿ’(ಮಣಿಪುರಿ),

ದಿ.17 ರಂದು ಹರ್ಷಲ್ ವ್ಯಾಸ್ ನಿರ್ದೇಶನದ ‘ರಾವಣ ಇನ್ ಟೆನ್ ಮೈಂಡ್ಸ್’(ಗುಜರಾತಿ),

ದಿ.18 ರಂದು ಶಾರದಾ ಸಿಂಗ್ ನಿರ್ದೇಶನದ ‘ರತಿನಾಥ್ ಕಿ ಚಾಚಿ’(ಹಿಂದಿ) ಪ್ರದರ್ಶನವಾಗಲಿವೆ.

ಭೂಮಿಗೀತ :

ದಿ.13 ರಂದು ಮಂಗಳಾ ನಿರ್ದೇಶನದ ‘ಶ್ರೀದೇವಿ ಮಹಾತ್ಮೆ’(ಕನ್ನಡ),

ದಿ.14.ರಂದು ಅರ್ಪಿತಾ ಧಾಗತ್ ನಿರ್ದೇಶನದ ‘ಐಟಂ’(ಗುಜರಾತಿ),

ದಿ.15 ರಂದು ಉಷಾ ಗಂಗೂಲಿ ನಿರ್ದೇಶನದ ‘ಹಮ್ ಮುಖ್ತಾರ’,

ದಿ.16 ರಂದು ರಬಿಜಿತ ಗೊಗೊಯ್ ನಿರ್ದೇಶನದ ‘ಬಾಘ್’(ಅಸ್ಸಾಮಿ),

ದಿ. 17 ರಂದು ನಿಮ್ಮಿ ರಾಫೆಲ್ ನಿರ್ದೇಶನದ ‘ಬಾಲಿ’(ಇಂಗ್ಲಿಷ್),

ದಿ.18 ರಂದು ಶ್ರವಣ್ ಹೆಗ್ಗೋಡು ನಿರ್ದೇಶನದ ‘ರೆಕ್ಸ್ ಅವರ್ಸ್, ಡೈನೋ ಏಕಾಂಗಿ ಪಯಣ’ ನಾಟಕ ಪ್ರದರ್ಶನಗೊಳ್ಳಲಿದೆ.

ವನರಂಗ :

ದಿ.13 ರಂದು ರೆಜಿನ್ ರೋಸ್ ನಿರ್ದೇಶನದ ‘1084ಎಸ್ ಮದರ್’(ತಮಿಳು),

ದಿ.14 ರಂದು ಮಹದೇವ ಹಡಪದ ನಿರ್ದೇಶನದ ‘ಸದ್ಯಕ್ಕಿದು ಹುಚ್ಚರ ಸಂತಿ’(ಕನ್ನಡ),

ದಿ.15 ರಂದು ಕೇವಲ್ ಧಲಿವಾಲ್ ನಿರ್ದೇಶನದ ‘ಬುಲ್ಹಾ‘(ಪಂಜಾಬಿ),

ದಿ.16ರಂದು ಅರ್ಪಿತಾ ಹೆಗಡೆ ನಿರ್ದೇಶನದ ‘ದಕ್ಷಯಜ್ಞ’(ಕನ್ನಡ ಯಕ್ಷಗಾನ),

ದಿ.17 ರಂದು ಜೋಸೆಫ್ ಜಾನ್ ನಿರ್ದೇಶನದ ‘ಹೂಗಾಳಿ’(ಕನ್ನಡ),

ದಿ.18 ರಂದು ಡಾ.ಶ್ರೀಪಾದ್ ಭಟ್ ನಿರ್ದೇಶನದ ‘ಮೂರು ಹೆಜ್ಜೆ ಮೂರು ಲೋಕ’ ನಾಟಕ ಪ್ರದರ್ಶನ ನಡೆಯಲಿದೆ.

ನಾಟಕೋತ್ಸವದಲ್ಲಿ ದೇಶದ ಬೇರೆ ಬೇರೆ ರಾಜ್ಯಗಳ ವಿವಿಧ ಭಾಷೆಗಳ 12 ನಾಟಕಗಳು ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ 6 ಕನ್ನಡ ನಾಟಕಗಳು ಪ್ರದರ್ಶನಗೊಳ್ಳಲಿವೆ. ಪ್ರತಿದಿನ ಮೂರು ಚಲನಚಿತ್ರಗಳಂತೆ ಸುಮಾರು 24 ಚಲನಚಿತ್ರಗಳ ಪ್ರದರ್ಶನವಿದೆ. ನಾಟಕೋತ್ಸವದ ಸಂದರ್ಭ ಕಲಾಮಂದಿರ ಆವರಣದಲ್ಲಿ 70 ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಕರಕುಶಲ ಹಾಗೂ ಗುಡಿ ಕೈಗಾರಿಕೆಗಳ ವಸ್ತು ಪ್ರದರ್ಶನ, ದೇಸಿ ಆಹಾರ ಪದ್ಧತಿಯ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.

Leave a Reply

comments

Related Articles

error: