ಮೈಸೂರು

ಮೈಸೂರು ಗ್ರಾಹಕ ಪರಿಷತ್ ವೆಬ್‍ಸೈಟ್‍ಗೆ ಹೊಸ ರೂಪ: ಎಂಜಿಪಿ ಈಗ ಇನ್ನಷ್ಟು ಸ್ಪಂದನಶೀಲ

ನಾಗರಿಕ-ಗ್ರಾಹಕರ ಹಕ್ಕುಗಳು-ಸಮಸ್ಯೆಗಳು ಮತ್ತು ಪರಿಸರ ಸಂಬಂಧೀ ಕಾಳಜಿ ವಹಿಸುವ ಸಲುವಾಗಿ 1989 ರಿಂದಲೂ ಸಕ್ರಿಯವಾಗಿರುವ ಮೈಸೂರು ಗ್ರಾಹಕ ಪರಿಷತ್‍, ತನ್ನ ಜಾಲತಾಣಕ್ಕೆ ಹೊಸ ಸ್ಪಂದನಶೀಲ ರೂಪ ನೀಡಿದೆ. ಕಳೆದ 27 ವರ್ಷಗಳಿಂದಲೂ ಎಂ.ಜಿ.ಪಿ ಒಂದು ಜವಾಬ್ದಾರಿಯುತ ಸ್ವಯಂಸೇವಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಮೈಸೂರು ನಾಗರಿಕರ ಮೆಚ್ಚುಗೆ ಗಳಿಸಿದೆ. ಇದೀಗ ಹೆಚ್ಚು ನಾಗರಿಕರನ್ನು ಒಳಗೊಳ್ಳುವ ಉದ್ದೇಶದಿಂದ ಸಂಸ್ಥೆಯ ವೆಬ್‍ಸೈಟ್‍ mygrapa.org ಗೆ ಹೊಸ ರೂಪ ನೀಡಲಾಗಿದೆ.

ಹೊಸ ರೂಪ ಪಡೆದ ವೆಬ್‍’ಸೈಟ್‍ನಲ್ಲಿ ಏನೇನು ಲಭ್ಯ :

  • ಗ್ರಾಹಕರು, ಮತ್ತು ನಾಗರಿಕ ಸ್ನೇಹಿ ಮಾಹಿತಿಗಳು.
  • ದೂರು ದಾಖಲಿಸಲು, ಸಹಲಹೆ ನೀಡಲು, ವಾಣಿಜ್ಯ ವಹಿವಾಟಿನ ಕುರಿತು, ನಾಗರಿಕ ಸೇವೆಗಳ ಕುಂದುಕೊರತೆಗಳ ಕುರಿತು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶವಿದೆ.
  • ಆಡಳಿತಾತ್ಮಕ ಸಮಸ್ಯೆಗಳು ತಲೆದೋರಿದಾಗ ಸರ್ಕಾರಿ ಸಂಸ್ಥೆಗಳು ಮತ್ತು ನಾಗರಿಕರ ನಡುವೆ ಸೇತು-ಬಂಧ ಪಾತ್ರ ವಹಿಸಲಿದೆ ಎಂಜಿಪಿ.
  • ದಾಖಲಾಗುವ ನಾಗರಿಕ ದೂರುಗಳು ಮಾಧ್ಯಮಗಳಿಗೆ ಲಭ್ಯವಾಗುವಂತೆ ಮಾಡಿ ತ್ವರಿತ ಗತಿಯಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವುದು.
  • ಸಮಸ್ಯೆಗಳ ಕುರಿತು ವಿಸ್ತೃತ ವಿವರಣೆ ಬರೆಯಲು ಅವಕಾಶವಿರುವ ಬ್ಲಾಗ್’ಸೇವೆ ಒದಗಿಸಿ ಆಡಳಿತಾತ್ಮಕ ಸಂಸ್ಥೆಗಳ ಗಮನ ಸೆಳೆಯುವುದು.
  • ಮೈಸೂರು ಗ್ರಾಹಕ ಪರಿಸತ್‍ನ ಚಟುವಟಿಕೆಗಳ ಕುರಿತು ತಕ್ಷಣದ ಮಾಹಿತಿ ಪ್ರಕಟಿಸಿ ಹೆಚ್ಚು ನಾಗರಿಕರು ಪಾಲ್ಗೊಳ್ಳುವಿಕೆಗೆ ಸಹಕಾರಿ.
  • ಎಂಜಿಪಿ ನಡೆದು ಬಂದ ದಾರಿ ಕುರಿತು ಸವಿವರ ಮಾಹಿತಿ ಲಭ್ಯವಿರಲಿದೆ.

Leave a Reply

comments

Related Articles

error: