ಮೈಸೂರು

ಬಹುರೂಪಿಯ ಚಲನಚಿತ್ರೋತ್ಸವಕ್ಕೆ ರಮೇಶ್ ಭಟ್ ನಾಳೆ ಚಾಲನೆ

ಮೈಸೂರು,ಜ.11 : ನಾಳೆಯಿಂದ ನಗರದಲ್ಲಿ ಜರುಗಲಿರುವ ರಂಗಾಯಣದ ಬಹುರೂಪಿ ನಾಟಕೋತ್ಸವದಲ್ಲಿ  ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ‘ಲಿಂಗ ಸಮಾನತೆ’ ವಿಷಯಕ್ಕೆ ಸಂಬಂಧಿಸಿದ ಚಲನಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಜ.12 ರಂದು ಬೆ.10ಕ್ಕೆ ಶ್ರೀರಂಗ ವೇದಿಕೆಯಲ್ಲಿ ನಡೆಯವ ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ  ನಟ, ರಂಗಕರ್ಮಿ ರಮೇಶ್‌ಭಟ್ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.  ಮ.12 ಕ್ಕೆ ‘ಲಾ ಸೋರ್ಸ್ ಡಿಸ್ ಪೆಮ್ಮೆಸ್’, 2 ಕ್ಕೆ ‘ನಾರ್ಥ್ ಕಂಟ್ರೀ’ ಚಿತ್ರ ಪ್ರದರ್ಶನಗೊಳ್ಳಲಿವೆ. ನಿತ್ಯ ಕ್ರಮವಾಗಿ ಬೆ.10.30 ರಿಂದ 12, ಮ.12 ರಿಂದ 1.30 ಹಾಗೂ 2 ರಿಂದ 5ಗಂಟೆ ನಡುವೆ ಚಿತ್ರ ಪ್ರದರ್ಶನ ನಡೆಯಲಿದೆ. (ಕೆ.ಎಂ.ಆರ್)

 

Leave a Reply

comments

Related Articles

error: