ಸುದ್ದಿ ಸಂಕ್ಷಿಪ್ತ

ಜ.12 ರಂದು ಸೈಕಲ್ ಜಾಥಾ

ಮೈಸೂರು,ಜ.11-ವಿದ್ಯಾವರ್ಧಕ ಸಂಘ, ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರೋವರ್ ದಳ-ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ 156ನೇ ಜಯಂತಿ ಹಾಗೂ ರಾಷ್ಟ್ರೀಯ ಯುವದಿನೋತ್ಸವದ ಪ್ರಯುಕ್ತ ಜ.12 ರಂದು ಬೆಳಿಗ್ಗೆ 9.30ಕ್ಕೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ.

ದೇವರಾಜ ಸಂಚಾರಿ ಪೊಲೀಸ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಜಿ.ಎನ್.ಮೋಹನ್ ಜಾಥಾವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿ.ವಿಶ್ವನಾಥ್, ಅಬ್ದುಲ್ ಜಮೀಲ್, ಗುಂಡಪ್ಪಗೌಡ ಆಗಮಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: