ಸುದ್ದಿ ಸಂಕ್ಷಿಪ್ತ

ಜ.12ರಂದು ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನಾಚರಣೆ

ಮಂಡ್ಯ (ಜ.11): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಡ್ಯ ಮತ್ತು ಮಹಿಳಾ ಸರ್ಕಾರಿ ಮಹಾವಿದ್ಯಾಲಯ, ಮಂಡ್ಯ ಇವರ ಸಹಯೋಗದಲ್ಲಿ ಜನವರಿ 12 ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ಮಹಿಳಾ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ದಿವ್ಯ ಚೇತನ ಸ್ವಾಮಿ ವಿವೇಕಾನಂದ ರವರ 156ನೇ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನ, ರಾಷ್ಟ್ರೀಯ ಯುವ ಸಪ್ತಾಹದ ಉದ್ಘಾಟನೆ ಹಾಗೂ 125ನೇ ವರ್ಷದ ಐತಿಹಾಸಿಕ ಚಿಕಾಗೋ ಸಮ್ಮೇಳನೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್. ಪುಟ್ಟಸ್ವಾಮಿ ನೆರವೇರಿಸುವರು ಹಾಗೂ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು ಕ್ರೀಡಾ ಸಾಮಾಗ್ರಿಗಳ ವಿತರಣೆ ಮಾಡುವರು ಎಂದು ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: