ದೇಶ

ಜಲ್ಲಿಕಟ್ಟು ಆಚರಣೆ ಮೇಲಿನ ನಿಷೇಧ ತೆರವುಗೊಳಿಸಲು ಸುಪ್ರೀಂ ನಕಾರ

ನವದೆಹಲಿ: ಸಂಕ್ರಾಂತಿ ಸುಗ್ಗಿಯ ಸಂದರ್ಭದಲ್ಲಿ ತಮಿಳುನಾಡಿನ ಪ್ರಮುಖ ಆಚರಣೆಯಾದ ಗೂಳಿ ಬೆದರಿಸುವ ಆಟ ಜಲ್ಲಿಕಟ್ಟಿಗೆ ಅವಕಾಶ ನೀಡಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಳ್ಳಿ ಹಾಕಿದೆ.

ಪೊಂಗಲ್ ಒಳಗೆ ತೀರ್ಪು ನೀಡಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಕೀಲರು ಸುಪ್ರೀಂ ವಕೀಲರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಮೊದಲೇ ಆದೇಶ ನೀಡಿ ಎಂದು ನಮ್ಮನ್ನು ಕೋರಿರುವುದು ಅಸಮಂಜಸ ಎಂದು ಕೋರ್ಟ್ ಹೇಳಿದೆ.

ಜಲ್ಲಿಕಟ್ಟಿಗೆ ಅವಕಾಶ ನೀಡಿ ಎಂದು ತಮಿಳಿನಾಡಿನಾದ್ಯಂತ ಪ್ರತಿಭಟನೆ ನಡೆಯುತ್ತದೆ. ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ತಮಿಳುನಾಡು ರಾಜ್ಯದಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆದೇ ತೀರುತ್ತದೆ, ಈ ವಿಚಾರದಲ್ಲಿ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.

ಜಲ್ಲಿಕಟ್ಟು ಬದಲಾಗಿ ಬೇರೆ ಹೆಸರಿನಲ್ಲಿ ಸ್ಪರ್ಧೆಯನ್ನು ನಡೆಸಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿದೆ.

Leave a Reply

comments

Related Articles

error: