ಮೈಸೂರು

ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ಶಿಕ್ಷಾರ್ಹ ಅಪರಾಧ : ಜಾಗೃತಿಗಾಗಿ ಕರಪತ್ರ ಹಂಚಿಕೆ

ಮೈಸೂರು,ಜ.12:- ಮೈಸೂರು ನಗರದ ಚಾಮರಾಜ ಮೊಹಲ್ಲಾ ವಾರ್ಡ್ ನಂ.23ರ ದಿವಾನ್ಸ್ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು, ಅನುಚಿತವಾಗಿ ವರ್ತಿಸಿ ನಿವಾಸಿಗಳಿಗೆ ತೊಂದರೆಯಾಗುವಂತೆ ಗಲಾಟೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬುದರ ಕುರಿತು ಜಾಗೃತಿ ಮೂಡಿಸಲು ಇಂದು ಭಿತ್ತಿ ಪತ್ರ ಅಂಟಿಸುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ವಾರ್ಡ್ ನಂ.23ರ ಪಾಲಿಕೆಯ ಸದಸ್ಯೆ ಪ್ರಮೀಳಾ ಭರತ್ ಭಿತ್ತಿ ಪತ್ರ ಅಂಟಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸ್ವಚ್ಛ ನಗರಿಯ ಪಟ್ಟ ಈ ಬಾರಿಯೂ ನಮ್ಮದಾಗಬೇಕು. ಕೇವಲ ಅದೊಂದೇ ಉದ್ದೇಶವಲ್ಲ. ಯಾವಾಗಲೂ ನಮ್ಮ ಮೈಸೂರು ಸ್ವಚ್ಛವಾಗಿರಬೇಕು. ಇಲ್ಲಿ ಬೇರೆ ಬೇರೆ ಕಡೆಗಳಿಂದ ಪ್ರವಾಸಿಗರು ಸದಾ ಬರುತ್ತಿರುತ್ತಾರೆ. ಅವರು ಮೈಸೂರಿಗೆ ಬಂದಾಗ ಮೈಸೂರು ಪರಿಸರ ಅವರಲ್ಲಿ ಅಸಹ್ಯ ಮೂಡಿಸಬಾರದು. ಈ ಭಾಗದಲ್ಲಿ ಧೂಮಪಾನ ಮಾಡುವುದು, ಮೂತ್ರ ವಿಸರ್ಜನೆ ಸೇರಿದಂತೆ ಅನುಚಿತ ಘಟನೆಗಳು ನಡೆಯುತ್ತಿವೆ ಎಂದು ಈಗಾಗಲೇ ದೂರುಗಳು ಬಂದಿತ್ತು. ಅದಕ್ಕಾಗಿ ನಾವಿಂದು ಸ್ಥಳೀಯ ನಿವಾಸಿಗಳಿಗೆ ಆತ್ಮಸ್ಥೈರ್ಯ ತುಂಬಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅಷ್ಟೇ ಅಲ್ಲದೇ ಮನೆ ಮನೆಗೆ ತೆರಳಿ, ಕರಪತ್ರ ನೀಡಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭ ಲಕ್ಷ್ಮಿಪುರಂ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರಘು, ಎಎಸ್ ಐ ಗೌರಿಶಂಕರ್, ಹೆಡ್ ಕಾನ್ಸಟೇಬಲ್ ಮಲ್ಲಿಕಾರ್ಜುನ, ಪಾಲಿಕೆಯ ಆರೋಗ್ಯ ಇಲಾಖಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: