ದೇಶಪ್ರಮುಖ ಸುದ್ದಿ

ಕಾರ್ಡ್ ಹೊರತೆಗೆಯಲು ಎಟಿಎಂ ಯಂತ್ರವನ್ನೇ ಒಡೆದ!

ಕಾಸರಗೋಡು (ಜ.12): ಎಟಿಎಂನಿಂದ ಹಣ ಪಡೆಯಲು ಹೋದ ವೇಳೆ ಕೆಲವೊಮ್ಮೆ ಕಾರ್ಡ್ ಯಂತ್ರದೊಳಗೆ ಸಿಲುಕಿಕೊಳ್ಳುವುದುಂಟು. ಅಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಅವರ ಸಹಾಯದಿಂದ ಕಾರ್ಡ್ ಹೊರ ಪಡೆಯಲಾಗುತ್ತದೆ.

ಆದರೆ ಇಲ್ಲೊಬ್ಬ ಭೂಪ ಮಾಡಿರುವ ಕೆಲಸ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕಾಸರಗೋಡಿನಲ್ಲಿ ಈ ಘಟನೆ ನಡೆದಿದ್ದು, ಮಧೂರು ರಸ್ತೆ ಉಳಿಯತ್ತಡ್ಕದಲ್ಲಿ ವ್ಯಕ್ತಿಯೊಬ್ಬ ಆಕ್ಸಿಸ್ ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡಲು ಹೋಗಿದ್ದಾನೆ.

ಈ ಸಂದರ್ಭದಲ್ಲಿ ಆತನ ಎಟಿಎಂ ಕಾರ್ಡ್ ಯಂತ್ರದೊಳಗೆ ಸಿಲುಕಿಕೊಂಡಿದೆ. ಆತ ಈ ಕುರಿತು ಬ್ಯಾಂಕ್ ಸಿಬ್ಬಂದಿಗೆ ಮಾಹಿತಿ ನೀಡುವ ಬದಲು ಸಲಕರಣೆಗಳಿಂದ ಎಟಿಎಂ ಯಂತ್ರವನ್ನೇ ಒಡೆದು ತನ್ನ ಕಾರ್ಡ್ ಹೊರ ತೆಗೆದುಕೊಂಡಿದ್ದಾನೆ. ಇದೀಗ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: