Uncategorized

ಬೆಳಗಾವಿ: ಸಾವಿರಾರು ಮಂದಿಯ ಜೀವ ಉಳಿಸಿದ ಇಬ್ಬರು ಯುವಕರು

ಬೆಳಗಾವಿ,ಜ.12-ತಮ್ಮ ಜೀವದ ಹಂಗು ತೊರೆದು ಇಬ್ಬರು ಯುವಕರು ಸಾವಿರಾರು ಪ್ರಯಾಣಿಕರ ಜೀವ ಉಳಿಸಿರುವ ಘಟನೆ ಬೆಳಗಾವಿಯ ಖಾನಾಪುರ್ ನಲ್ಲ ನಡೆದಿದೆ.

ಕೊಲ್ಲಾಪುರ-ಹೈದರಾಬಾದ್ ರೈಲು ಹುಬ್ಬಳ್ಳಿ ಕಡೆ ಆಗಮಿಸುತ್ತಿತ್ತು. ಈ ಸಂದರ್ಭದಲ್ಲಿ ಬೆಳಗಾವಿಯ ಖಾನಾಪುರ ರೈಲ್ವೆ ಹಳಿ ಮೇಲೆ ಏಕಾಏಕಿ ಮರ ಬಿದ್ದಿತ್ತು. ಬೈಕ್ ನಲ್ಲಿ ತೆರಳುತ್ತಿದ್ದ ರಿಯಾಜ್ ಮತ್ತು ತೌಫಿಕ್ ಇದನ್ನು ಗಮನಿಸಿ ಅಪಾಯದ ಮುನ್ಸೂಚನೆ ಅರಿತರು.

ತಕ್ಷಣ ಇವರಿಬ್ಬರು ತಮ್ಮ ಅಂಗಿಯನ್ನು ಬಿಚ್ಚಿ ರೈಲ್ವೆ ಹಳಿ ಸಮೀಪದಿಂದ ಓಡುತ್ತಾ ಅಪಾಯವಿದೆ ಎಂಬುದನ್ನು ಸೂಚಿಸಿದರು. ಇದನ್ನು ಗಮನಿಸಿದ ರೈಲು ಚಾಲಕ ಬ್ರೇಕ್ ಹಾಕಿದ್ದರಿಂದ ಮರದ ಸಮೀಪ ರೈಲು ಬಂದು ನಿಲ್ಲುವ ಮೂಲಕ ಭಾರೀ ದುರಂತವೊಂದು ತಪ್ಪಿದೆ.

ಇಬ್ಬರು ಯುವಕರ ಸಮಯ ಪ್ರಜ್ಞೆಯಿಂದಾಗಿ ರೈಲಿನಲ್ಲಿದ್ದ ಸಾವಿರಾರು ಮಂದಿಯ ಪ್ರಾಣ ಉಳಿದಿದೆ. ರಿಯಾಜ್ ಮತ್ತು ತೌಫಿಕ್ ಕೆಲಸದ ಬಗ್ಗೆ ರೈಲ್ವೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: