ಸುದ್ದಿ ಸಂಕ್ಷಿಪ್ತ

ಜ.14 ರಿಂದ ಬಂಜೆತನ ತಪಾಸಣಾ ಶಿಬಿರ

ಮೈಸೂರು,ಜ.12 : ಆಲನಹಳ್ಳಿಯಲ್ಲಿರುವ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆವತಿಯಿಂದ ಜ.14 ರಿಂದ 19ರವರೆಗೆ ಬಂಜೆತನ ವಿಶೇಷ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

ಶಿಬಿರವು ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ನಡೆಯಲಿದ್ದು, ಮುಟ್ಟಿನ ಸಮಸ್ಯೆ, ನಿಮಿರು ದೌರ್ಬಲ್ಯ, ಶೀಘ್ರ ಸ್ಕಲನ, ಸ್ವಪ್ನ ಸ್ಕಲನ ಹಾಗೂ ಪುರುಷರ ಬಂಜೆತನ ಮುಂತಾದವುಗಳ ಬಗ್ಗೆ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಸಲಹಾ ಲಭ್ಯವಿರಲಿದೆ. ವಿವರಗಳಿಗೆ ದೂ.ಸಂ. 0821 2548231, 2548433 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: