ಸುದ್ದಿ ಸಂಕ್ಷಿಪ್ತ
ಜ.13ರಂದು ‘ವಿಜ್ಞಾನ ದೀಪಕ-ಪ್ರೊ.ಜೆ.ಆರ್.ಲಕ್ಷ್ಮಣರಾವ್’ ಪುಸ್ತಕ ಬಿಡುಗಡೆ
ಮೈಸೂರು,ಜ.12 : ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ವತಿಯಿಂದ ‘ವಿಜ್ಞಾನ ದೀಪಕ- ಪ್ರೊ.ಜೆ.ಆರ್.ಲಕ್ಷ್ಮಣರಾವ್’ ಅವರ ಪುಸ್ತಕ ಲೋಕಾರ್ಪಣೆಯನ್ನು ಜ.13ರ ಬೆಳಗ್ಗೆ 10.30ಕ್ಕೆ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜೆಎಸ್ಎಸ್ಎಸ್ ಟಿಯು ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎಸ್.ಆನಂದಮೂರ್ತಿ ಉದ್ಘಾಟಿಸಲಿದ್ದಾರೆ. ಕುವೆಂಪು ವಿವಿಯ ನಿವೃತ್ತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಪುಸ್ತಕ ಬಿಡುಗಡೆಗೊಳಿಸುವರು. ಪುಸ್ತಕ ಕುರಿತು ಜೆ.ಎಲ್.ಅನಿಲ್ ಕುಮಾರ್, ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯ ಜಿ.ಸತೀಶ್ ಮಾತನಾಡುವರು. ಸೋಮಾನಿ ಬಿ.ಎಡ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಎ.ವಿ.ಗೋವಿಮದರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)