ಪ್ರಮುಖ ಸುದ್ದಿಮೈಸೂರು

ಪ್ರಧಾನಿ ಮೋದಿಗೆ ಕರ್ನಾಟಕ ಅಂದ್ರೆ ಭಯ ಕಾಡ್ತಿದೆ : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ನಾಡಿನ ಜನರಿಗೆ ಸಂಕ್ರಾಂತಿ ಶುಭಾಶಯ ತಿಳಿಸಿದ ಸಿಎಂ

ಮೈಸೂರು,ಜ.14:-  ಮೈಸೂರಿನಲ್ಲಿಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ರೈತ ಬಂಧುಗಳಿಗೆ ಸಂಕ್ರಾತಿ ಹಬ್ಬದ ಶುಭಾಶಯಗಳನ್ನು ಕೋರಿದರು.

ಮೈಸೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ರೈತ ಬಂಧುಗಳು ನೆಮ್ಮದಿಯಾಗಿ ಜೀವನ ಸಾಗಿಸಲಿ ಎಂದರಲ್ಲದೇ ನಾಡಿನ ಜನರಿಗೆ ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದರು. ಪೊಲೀಸ್ ಇಲಾಖೆಯ ಔರಾದ್ಕರ್ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ ಇದೆ. ಔರಾದ್ಕರ್ ವರದಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡುವ ಸಂಬಂಧ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುತ್ತೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾಧ್ಯಮದವರು ಯಾಕೆ ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ ನನಗೆ ಗೊತ್ತಿಲ್ಲ. ಸುಳ್ಳು ಸುದ್ದಿ ಹಬ್ಬಿಸುವ ಜನರಿಗೆ ಏನು ಸಿಗುತ್ತದೋ ಗೊತ್ತಿಲ್ಲ. ನಮ್ಮ ಸರ್ಕಾರ ಭದ್ರವಾಗಿದೆ, ಅಭದ್ರವಾಗಿಲ್ಲ. ರಾಜ್ಯದಲ್ಲಿ ಆಪರೇಷನ್ ಕಮಲ‌ ನಡೆಯುತ್ತಿದೆ ಎಂದು ಸಿಎಂ ಅಚ್ಚರಿಯ ಬಹಿರಂಗ ಹೇಳಿಕೆ ನೀಡಿದ್ದು, ಬಿಜೆಪಿಯವರು ಯಾರ್ಯಾರನ್ನು ಸಂಪರ್ಕಿಸಿದ್ದಾರೆ ಎಂಬುದು ನನಗೆ ಗೊತ್ತಿದೆ.ಯಾರ್ಯಾರಿಗೆ ಯಾವ್ಯಾವ ದೊಡ್ಡ ಉಡುಗೊರೆಗಳ ಆಮಿಷ ಒಡ್ಡಿದ್ದಾರೆಂಬುದು ಗೊತ್ತಿದೆ. ಅವರು ಆಪರೇಷನ್ ಕಮಲ ಮಾಡುತ್ತಿಲ್ಲ ಎಂಬುದರ ಬಗ್ಗೆ ಇನ್ನು ಅನುಮಾನ ಏಕೆ ? ಎಲ್ಲವನ್ನೂ ನಾನು ಗಮನಿಸುತ್ತಿದ್ದೇನೆ. ಆ ಯಾವ ಪ್ರಯತ್ನ ಸಫಲವಾಗಲ್ಲ‌ ಎಂದರು.

ಮೂರು ಶಾಸಕರು ಮುಂಬೈಗೆ ತೆರಳಿರೋ ವಿಚಾರಕ್ಕೆ ಪ್ರತಿಕ್ರಿಯಿಸಿ ನನ್ನ ಜೊತೆ ಮೂರು ಶಾಸಕರು ಸಂಪರ್ಕದಲ್ಲಿದ್ದಾರೆ . ಬೆಳಿಗ್ಗೆ ಕೂಡ ಅವರ ಜೊತೆ ಮಾತನಾಡಿದ್ದೇನೆ ಎಂದರು.

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಿದೆ. ಶ್ರೀಗಳು ಪವಾಡಪುರುಷರು.ಅವರ ಆರೋಗ್ಯದಲ್ಲಿ ಏರು ಪೇರು ಇರೋದು ಸತ್ಯ.ಸರ್ಕಾರ ಕೂಡ ನಿತ್ಯ ಶ್ರೀಗಳ ಆರೋಗ್ಯದ ಸ್ಥಿತಿಗತಿಗಳನ್ನು ಗಮಿಸುತ್ತಿದೆ.ವಯಸ್ಸಿನ ಕಾರಣದಿಂದ ಈ ರೀತಿ ಸಮಸ್ಯೆ ಆಗೋದು ಸಹಜ. 5 ಮಂದಿ ನುರಿತ ವೈದ್ಯರ ತಂಡ, ಕ್ಷಣ ಕ್ಷಣಕ್ಕೂ ಅವರ ಆರೋಗ್ಯ ತಪಾಸಣೆಯಲ್ಲಿದ್ದಾರೆ. ಶ್ರೀಗಳು ಬೇಗ ಗುಣಮುಖರಾಗುತ್ತಾರೆ ಎಂದರು.

ಕ್ಲರ್ಕ್ ಅನ್ನೋ ಪ್ರಧಾನಿ ಮೋದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಕ್ಲರ್ಕ್ ಅನ್ನೋ ಪದ ಎಲ್ಲಿ ಸೃಷ್ಟಿಯಾಗಿದೆ ಗೊತ್ತಿಲ್ಲ. ಮೋದಿ ಯಾಕೆ ಹೀಗೆ ಹೇಳಿದ್ದಾರೋ ನನಗೆ ಗೊತ್ತಿಲ್ಲ.ನಾವು ರಾಜ್ಯದಲ್ಲಿ ನಮನ್ವಯತೆಯಿಂದ ಅಧಿಕಾರ ನಡೆಸುತ್ತಿದ್ದೇವೆ. ಪ್ರಧಾನಿ ಮೋದಿಗೆ ಕರ್ನಾಟಕ ಅಂದ್ರೆ ಭಯ ಕಾಡ್ತಿದೆ. ಮುಂದಿನ ಚುನಾವಣೆಯಲ್ಲಿ ರಾಜಕೀಯ ಅಸ್ಥಿರತೆ ಕಂಡು ಮೋದಿಗೆ ಕರ್ನಾಟಕ ಅಂದ್ರೆ ಭಯವಾಗುತ್ತಿದೆ. ಇಲ್ಲಿ ಯಾರೂ ಕ್ಲರ್ಕ್ ಗಳು ಇಲ್ಲ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: