ಕ್ರೀಡೆಮೈಸೂರು

ಟಿಪ್ಪು ಟೈಗರ್ ಕಪ್ ಸೀಸನ್-4 ರಾಜ್ಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ : ಮೂನ್‍ಸ್ಟಾರ್ ತಂಡಕ್ಕೆ ಜಯ

ಮೈಸೂರು,ಜ.14:- ಮೈಸೂರಿನಲ್ಲಿ ಇತ್ತೀಚೆಗೆ  ಟಿಪ್ಪು ಟೈಗರ್ ಕಪ್ ಸೀಸನ್-4 ರಾಜ್ಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ-ಟಿ20 ನಡೆಯಿತು.

ಮೂನ್ ಸ್ಟಾರ್ ಕ್ರಿಕೆಟ್ ಕ್ಲಬ್, ಮೈಸೂರು, ಕೊಳ್ಳೇಗಾಲ ಟಿಪ್ಪು ಕ್ರಿಕೆಟ್ ಕ್ಲಬ್, ಕೊಳ್ಳೇಗಾಲ ಮತ್ತು ಫರೈಸೆ ಸ್ಟೀಲ್, ಮೈಸೂರು ಇವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನ (ಪೆವಿಲಿಯನ್) ದಲ್ಲಿ ಟಿಪ್ಪು ಟೈಗರ್ ಕಪ್ ಸೀಸನ್-4 ರಾಜ್ಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ-ಟಿ20 ಅನ್ನು ಏರ್ಪಡಿಸಲಾಗಿತ್ತು. ಒಟ್ಟು 16 ತಂಡಗಳು ಇದರಲ್ಲಿ ಭಾಗವಹಿಸಿದ್ದು, ಈ ಪೈಕಿ ಮೂನ್‍ಸ್ಟಾರ್ ಕ್ರಿಕೆಟ್ ಕ್ಲಬ್ ಮತ್ತು ಕೊಳ್ಳೇಗಾಲ ಕ್ರಿಕೆಟ್ ಕ್ಲಬ್‍ಗಳು ಫೈನಲ್ ತಲುಪಿತ್ತು. ಮಹಾರಾಜ ಕಾಲೇಜು ಮೈದಾನ (ಪೆವಿಲಿಯನ್) ದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಳ್ಳೇಗಾಲ ತಂಡವು 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮೂನ್‍ಸ್ಟಾರ್ ತಂಡವು 16.3 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿ ಪಂದ್ಯದಲ್ಲಿ ಜಯಗಳಿಸಿತು. ನವೀನ್.ಎಂ.ಜಿ. ಅವರು ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಟಿ.ಮಂಜುನಾಥ್ ಅವರು ಮ್ಯಾನ್ ಆಫ್ ದಿ ಸೀರಿಸ್ & ಬೌಲರ್ ಪ್ರಶಸ್ತಿ ಪಡೆದರು.

ವಿಜೇತ ತಂಡಕ್ಕೆ 1,00,000 ರೂ. ಬಹುಮಾನ ಮತ್ತು ರನ್ನರ್ ತಂಡಕ್ಕೆ 50,000ರೂ. ನಗದು ಬಹುಮಾನ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ವಿವಿ ದೈಹಿಕ ವಿಭಾಗದ ನಿರ್ದೇಶಕ ಕೃಷ್ಣಯ್ಯ, ಮುಖ್ಯ ಕೋಚ್  ಮನ್ಸೂರ್ ಅಹಮದ್ ಖಾನ್, ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: