ಕ್ರೀಡೆ

ಅತ್ಯಾಚಾರ ಆರೋಪ: ರೊನಾಲ್ಡೋ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

ವಾಷಿಂಗ್ಟನ್,.14-ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಪೋರ್ಚುಗಲ್ ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.

2009 ರಲ್ಲಿ ಅಮೆರಿಕಾದ ರೂಪದರ್ಶಿ ಮೇಲೆ ನಡೆದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಈ ಬಗ್ಗೆ ರೊನಾಲ್ಡೋ ಅವರ ಡಿಎನ್ ಸಂಗ್ರಹಕ್ಕಾಗಿ ಅವರ ವಿರುದ್ಧ ಲಾಸ್ ವೇಗಾಸ್ ಪೊಲೀಸರು ವಾರೆಂಟ್ ಜಾರಿಮಾಡಿದ್ದಾರೆ.

2009ರಲ್ಲಿ ಹೊಟೇಲ್ ರೂಮ್ವೊಂದರಲ್ಲಿ ಕ್ರಿಸ್ಟಿಯಾನೊ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ ಸುದ್ದಿಯನ್ನು ಬಹಿರಂಗಪಡಿಸದಂತೆ 2.7 ಕೋಟಿ ರೂ. ಹಣದ ಆಮಿಷ ಒಡ್ಡಿದ್ದರು ಎಂದು ಕಳೆದ ಅಕ್ಟೋಬರ್ ನಲ್ಲಿ ರೂಪದರ್ಶಿ ಆರೋಪ ಮಾಡಿದ್ದರು.

ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಲಾಸ್ ವೇಗಾಸ್ ಪೊಲೀಸರು, ರೊನಾಲ್ಡೋಗೆ ಡಿಎನ್ ಸ್ಯಾಂಪಲ್ ನೀಡುವಂತೆ ತಿಳಿಸಿದ್ದರು. ಆದರೆ ವಿಷಯವನ್ನು ಗಂಭೀರವಾಗಿ ಪರಿಗಣಿಸದ ರೊನಾಲ್ಡೊ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.

ದೂರಿಗೆ ಸಂಬಂಧಿಸಿದಂತೆ ಸಹಕರಿಸದ ಕಾರಣ ರೊನಾಲ್ಡೊ ವಿರುದ್ಧ ಲಾಸ್ ವೇಗಾಸ್ ಪೊಲೀಸರು ವಾರೆಂಟ್ ಜಾರಿ ಮಾಡಿದ್ದಾರೆ. ಸಂಬಂಧ ವಾರೆಂಟ್ ಪ್ರತಿಯನ್ನು ಲಾಸ್ ವೇಗಾಸ್ ಪೊಲೀಸರು ಇಟಲಿ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. (ಎಂ.ಎನ್)

 

Leave a Reply

comments

Related Articles

error: