ಮನರಂಜನೆ

ಪತಿ ಜತೆ ನಟಿಸಲ್ಲ ಎಂದ ದೀಪಿಕಾ ಪಡುಕೋಣೆ.!

ಮುಂಬೈ,ಜ.14-ಬಾಲಿವುಡ್ ನ ತಾರಾ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ಇಬ್ಬರು ಒಟ್ಟಿಗೆ ನಟಿಸುತ್ತಾರೆ ಎಂದು ಅಭಿಮಾನಿಗಳು ಕಾಯ್ತ ಇದ್ದರು.

ಆದರೆ ಪತಿಯೊಂದಿಗೆ ನಟಿಸುವುದಿಲ್ಲ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ. ಪತಿಯ ಹೊಸ ಚಿತ್ರದಲ್ಲಿ ದೀಪಿಕಾ ನಡಿಸುವಂತೆ ಅಫರ್ ಬಂದಿತ್ತು. ಈ ಚಿತ್ರದಲ್ಲಿ ನಾನು ನಟಿಸಲ್ಲ ಎಂದಿದ್ದಾರಂತೆ ದೀಪಿಕಾ.

ರಣ್ವೀರ್ ಸಿಂಗ್ ಸದ್ಯ ’83’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು 1983ರಲ್ಲಿ ವಿಶ್ವಕಪ್ ಗೆದ್ದ ಭಾರತದ ಕ್ರಿಕೆಟ್ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಅವರ ಬಯೋಪಿಕ್ ಸಿನಿಮಾ. ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್ ಅಭಿನಯಿಸುತ್ತಿದ್ದರೇ, ಅವರ ಪತಿ ರೂಮಿ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದು ಸುಳ್ಳಾಗಿದೆ.

83 ಸಿನಿಮಾ ಸಂಪೂರ್ಣವಾಗಿ ಕ್ರಿಕೆಟ್ ಆಧಾರಿತ ಚಿತ್ರ. ಇದರಲ್ಲಿ ಕಪಿಲ್ ದೇವ್ ಮತ್ತು ಭಾರತ ಕ್ರಿಕೆಟ್ ಕುರಿತು ಹೇಳಲಾಗ್ತಿದೆ. ಹಾಗಾಗಿ, ಪತ್ನಿ ಪಾತ್ರಕ್ಕೆ ಹೆಚ್ಚಿನ ಮಹತ್ವವಿಲ್ಲ. ಹಾಗಾಗಿ, ದೀಪಿಕಾ ಈ ಸಿನಿಮಾ ಮಾಡುವುದಿಲ್ಲ ಎಂದಿದ್ದಾರಂತೆ.

ಈ ಮೂಲಕ ಮದುವೆ ಬಳಿಕ ಪತಿ-ಪತ್ನಿ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಆಸೆ ನಿರಾಸೆಯಾಯಿತು. ಕಬೀರ್ ಖಾನ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಕಪಿಲ್ ದೇವ್ ಪತ್ನಿ ರೂಮಿ ಪಾತ್ರಕ್ಕೆ ಯಾರನ್ನ ಕರೆತರಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

`ಬಾಜಿರಾವ್ ಮಸ್ತಾನಿ’, ‘ರಾಮ್ ಲೀಲಾ’, ‘ಪದ್ಮಾವತ್’ ಚಿತ್ರಗಳಲ್ಲಿ ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಅಭಿನಯಿಸಿದ್ದಾರೆ. (ಎಂ.ಎನ್)

 

 

Leave a Reply

comments

Related Articles

error: