ಪ್ರಮುಖ ಸುದ್ದಿಮೈಸೂರು

ಜೀವ ಬೆದರಿಕೆ : ಸೂಕ್ತ ರಕ್ಷಣೆಗೆ ಮನವಿ

ಪೊಲೀಸ್ ಆಯುಕ್ತರ ನೂತನ ಕಟ್ಟಡದ ಬಗ್ಗೆ ದಾವೆ ಹಿನ್ನಲೆ : ಬೆದರಿಕೆ

ಮೈಸೂರು,ಜ.14 : ಪೊಲೀಸ್ ಸಂದೇಶಕಾರರೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ತಮ್ಮ ಹಾಗೂ ಕುಟುಂಬದವರ ಮೇಲೆ ಜೀವ ಬೆದರಿಕೆಯನ್ನೊಡ್ಡಿದ್ದು ಆದ್ದರಿಂದ ತಮಗೇ ಸೂಕ್ತ ರಕ್ಷಣೆ ನೀಡಬೇಕೆಂದು ಬ್ಯಾಂಡ್ ಬಂಗ್ಲೆ ರಸ್ತೆಯ ನಿವಾಸಿ, ಸಾಮಾಜಿಕ ಹೋರಾಟಗಾರ ಎಂ.ಆರ್.ಅಶೋಕ್ ಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪೊಲೀಸ್ ಆಯುಕ್ತರ ನೂತನ ಕಟ್ಟಡ ನಿರ್ಮಾಣದ ವಿರುದ್ಧ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಹಿನ್ನಲೆಯಲ್ಲಿ ಬೆದರಿಕೆಯೊಡ್ಡಲಾಗಿದ್ದು, ಕಟ್ಟಡಕ್ಕೆ ಸಂಬಂಧಿಸಿದಂತೆ ಹೂಡಿರುವ ದಾವೆಯನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ದುಷ್ಪರಿಣಾಮ ಎದುರಿಸಬೇಕಾಗುವುದು ಎಂದು ಪೊಲೀಸ್ ಸಂದೇಶಕಾರನೆಂದು ಹೇಳಿಕೊಳ್ಳುವ ಶಶಿ ಅಲಿಯಾಸ್ ಕೆಂಚ ಎಂಬ ವ್ಯಕ್ತಿ ಎಚ್ಚರಿಸಿದ್ದಾನೆ ಎಂದು ತಿಳಿಸಿದ್ದಾರೆ.

ಅಲ್ಲದೇ ತಮ್ಮ ಮೇಲೆ ವಿನಾಕಾರಣ ಜಗಳ ಮಾಡಿರುವ ಆ ವ್ಯಕ್ತಿಯು, ದಾವೆಯನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ, ಇದರಿಂದ ತಮಗೂ ಹಾಗೂ ಕುಟುಂಬದವರಿಗೆ ಜೀವ ಬೆದರಿಕೆಯಿದ್ದು ಕೂಡಲೇ ಆ ವ್ಯಕ್ತಿಯನ್ನು ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಂಡು ತಮಗೂ ಹಾಗೂ ಕುಟುಂಬಕ್ಕೂ  ರಕ್ಷಣೆ ನೀಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ, ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ಅವರಿಗೆ ಗೃಹ ಸಚಿವ ಎಂ.ಬಿ.ಪಾಟೀಲ್, ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: