ಮೈಸೂರುಸುದ್ದಿ ಸಂಕ್ಷಿಪ್ತ

ಪತ್ರಕರ್ತರ ಅಭ್ಯುದಯ ಸಹಕಾರ ಸಂಘ ಸದಸ್ಯತ್ವ-ಅವಕಾಶ ವಿಸ್ತರಣೆ

ಮೈಸೂರು ಜಿಲ್ಲಾ ಕಾರ್ಯನಿರತ ಪರ್ತಕರ್ತರ ಅಭ್ಯುದಯದ ಉದ್ದೇಶವಿರಿಸಿಕೊಂಡು ಸಹಕಾರ ಸಂಘ ಸ್ಥಾಪನೆಗೆ ಉದ್ದೇಶಿಸಲಾಗಿದೆ.

ಸದಸ್ಯತ್ವಕ್ಕಾಗಿ ಬರುತ್ತಿರುವ ಹೆಚ್ಚಿನ ಬೇಡಿಕೆ ಗಮನದಲ್ಲಿಟ್ಟುಕೊಂಡು ಸದಸ್ಯತ್ವ ಅವಕಾಶವನ್ನು ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಿಟಿಪಿ ಆಪರೇಟರ್ಸ್, ಸಂಪಾದಕೀಯ ವಿಭಾಗ, ಪ್ರಸರಣ ವಿಭಾಗ, ಜಾಹೀರಾತು ವಿಭಾಗ ಹಾಗೂ ಆಡಳಿತ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ, ಆಯಾ ಸಂಸ್ಥೆಯ ಮುಖ್ಯಸ್ಥರ ಸಹಿವುಳ್ಳ ಪತ್ರದೊಂದಿಗೆ ಸಂಘದ ನಿಯಮಾವಳಿ ಪ್ರಕಾರ ಷೇರು ಪಡೆಯಬಹುದಾಗಿದೆ.

ಒಂದು ಷೇರಿನ ಬೆಲೆ ಒಂದು ಸಾವಿರ ರೂಪಾಯಿಗಳಾಗಿದ್ದು, ಪ್ರವೇಶ ಶುಲ್ಕ ಒಂದು ನೂರು ರೂ; ಷೇರು ಹಾಗೂ ಷೇರು ಶುಲ್ಕ ಒಂದು ನೂರು ರೂಪಾಯಿಗಳಾಗಿರುತ್ತದೆ.

ಪತ್ರಕರ್ತರ ಸಂಘದಲ್ಲಿ ದೊರಕುವ ಅರ್ಜಿ ಪಡೆದು 5 ಫೋಟೊ, ಆಧಾರ್ ಕಾರ್ಡ್, ಪ್ಯಾನ್‍ಕಾರ್ಡ್‍ ದಾಖಲಾತಿಗಳನ್ನು ನೀಡಿ ಷೇರುದಾರರಾಗಬಹುದಾಗಿದೆ.

ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9741511340 ಹಾಗೂ 9480748177 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: