ಮೈಸೂರು

ಜ.16, 17ರಂದು ಎನ್.ಹೆಚ್.ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರ

ಮೈಸೂರು,ಜ.14 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆವತಿಯಿಂದ ಅಸ್ತಮಾ ಮತ್ತು ಮಕ್ಕಳ ಉಸಿರಾಟದ ತೊಂದರೆ ತಪಾಸಣೆಯನ್ನು ಜ.16,17ರಂದು ಬೆಳಗ್ಗೆ 10 ರಿಂದ ‍ಮಧ್ಯಾಹ್ನ 2ರವರೆಗೆ ನಡೆಸಲಾಗುತ್ತಿದೆ. ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಲಿವರ್ ಮತ್ತು ಪ್ಯಾನ್ ಕ್ರಿಯಾಸ್ ಕ್ಲಿನಿಕ್ :

ಜ.16ರಂದು ಮಧ್ಯಾಹ್ನ 12 ಗಂಟೆಯಿಂದ 2ರವರಗೆ ಲಿವರ್ ಮತ್ತು ಪ್ಯಾನ್ಕ್ರಿಯಾಸ್ ಕ್ಲಿನಿಕ್ ಅನ್ನು ನಡೆಸಲಾಗುತ್ತಿದೆ. ವೈದ್ಯಕೀಯ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಜೊತೆ ಉಚಿತ ಸಮಾಲೋಚನೆಯು ಲಭ್ಯವಿರಲಿದೆ. ಕುರುಳಿನ ಎಂಡೋಸ್ಕೋಪಿ, ಕೊಲನೋಸ್ಕೋಪಿ, ಇಆರ್ ಸಿಪಿ, ಎಲ್.ಎಫ್. ಟಿ, ಯುಎಸ್ ಜಿ ಚಿಕಿತ್ಸೆಗಳಿಗೆ ಲ್ಯಾಬ್ ಮತ್ತು ರೇಡಿಯಾಲಜಿ ತನಿಖೆಗಳು ಲಭ್ಯವಿರಲಿದೆ.

ಪೀಡಿಯಾಟ್ರಿಕ್ ಪಲ್ಮನಾಲಜಿ :

ಜ.16,17ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ಪೀಡಿಯಾಟ್ರಿಕ್ ಪಲ್ಮನಾಲಜಿ ಕ್ಲಿನಿಕ್ ಆಯೋಜಿಸಿದ್ದು, ಅಸ್ತಮಾ, ಟಿ.ಬಿ., ಅಲರ್ಜಿ, ಮಕ್ಕಳ ಶ್ವಾಸಕೋಶ ಸಂಬಂಧಿ ಸಮಸ್ಯೆಗಳ ಬಗ್ಗೆ ಸೂಕ್ತ ಸಲಹೆ ಮತ್ತು ತಪಾಸಣೆ ನಡೆಸಲಾಗುವುದು.

ಈ ಶಿಬಿರದಲ್ಲಿ ಪಾಲ್ಗೊಳ್ಳಲಿಚ್ಚಿಸುವವರು ಹೆಸರು ನೊಂದಾಯಿಸಲು ಮೊ.ಸಂ. 95380 52378 ಅನ್ನು ಸಂಪರ್ಕಿಸಬಹುದು ಎಂದು ಮಾರುಕಟ್ಟೆ ವ್ಯವಸ್ಥಾಪಕ ಕೆ.ವಿ.ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: